ಹೋಮ್-ಸ್ಟೇ ನಿರ್ಮಾಣಕ ಹಾಗೂ ನವೀಕರಣಕ್ಕಾಗಿ ಸಹಾಯಧನ
ಕೊಪ್ಪಳ, 25 ಜುಲೈ (ಹಿ.ಸ.) : ಆ್ಯಂಕರ್ : ಕೊಪ್ಪಳ ಪ್ರವಾಸೋದ್ಯಮ ಇಲಾಖೆಯಿಂದ ಪರಿಶಿಷ್ಟ ಪಂಗಡದ ಬುಡಕಟ್ಟು ಅಥವಾ ಆದಿವಾಸಿ ಸಮುದಾಯವಿರುವ ಗ್ರಾಮಗಳಲ್ಲಿ ಆತಿಥ್ಯಾಧಾರಿತ ಪ್ರವಾಸೋದ್ಯಮವನ್ನು ಉತ್ತೇಜಿಸುವುದು, ಸ್ಥಳೀಯ ಜನರಿಗೆ ಸ್ವಯಂ ಉದ್ಯೋಗಾವಕಾಶವನ್ನು ಒದಗಿಸುವುದು ಹಾಗೂ ಬುಡಕಟ್ಟು ಸಮುದಾಯದ ಸಂಸ್ಕ
ಹೋಮ್-ಸ್ಟೇ ನಿರ್ಮಾಣಕ ಹಾಗೂ ನವೀಕರಣಕ್ಕಾಗಿ ಸಹಾಯಧನ


ಕೊಪ್ಪಳ, 25 ಜುಲೈ (ಹಿ.ಸ.) :

ಆ್ಯಂಕರ್ : ಕೊಪ್ಪಳ ಪ್ರವಾಸೋದ್ಯಮ ಇಲಾಖೆಯಿಂದ ಪರಿಶಿಷ್ಟ ಪಂಗಡದ ಬುಡಕಟ್ಟು ಅಥವಾ ಆದಿವಾಸಿ ಸಮುದಾಯವಿರುವ ಗ್ರಾಮಗಳಲ್ಲಿ ಆತಿಥ್ಯಾಧಾರಿತ ಪ್ರವಾಸೋದ್ಯಮವನ್ನು ಉತ್ತೇಜಿಸುವುದು, ಸ್ಥಳೀಯ ಜನರಿಗೆ ಸ್ವಯಂ ಉದ್ಯೋಗಾವಕಾಶವನ್ನು ಒದಗಿಸುವುದು ಹಾಗೂ ಬುಡಕಟ್ಟು ಸಮುದಾಯದ ಸಂಸ್ಕøತಿ, ಪರಂಪರೆ ಮತ್ತು ನೈಸರ್ಗಿಕ ಸಂಪತ್ತನ್ನು ಪ್ರವಾಸಿಗರಿಗೆ ಪರಿಚಯಿಸುವ ದೃಷ್ಟಿಯಿಂದ ಪ್ರತಿ ಹೋಂ-ಸ್ಟೇ ನಿರ್ಮಾಣಕ್ಕಾಗಿ 5 ಲಕ್ಷ ರೂ. ಹಾಗೂ ನವೀಕರಣಕ್ಕಾಗಿ 3 ಲಕ್ಷ ರೂ.ಗಳ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಹೋಂ-ಸ್ಟೇ ನಿರ್ಮಾಣಕ್ಕಾಗಿ ಒಟ್ಟು 39 ಗ್ರಾಮಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ವಜ್ರಬಂಡಿ ಗ್ರಾಮ ಪಂಚಾಯತಿ ಯಿಂದ ಯಲಬುರ್ಗಾ ತಾಲ್ಲೂಕಿನ ಸಾಲ್ಬಾವಿ ಗ್ರಾಮ ಮಾಟಲದಿನ್ನಿ, ಗ್ರಾ.ಪಂ. ಪುಟಕಮರಿ, ಎನ್ ಜಾರಕುಂಟಿ, ಭುದೂರ, ಗ್ರಾಂ. ಪಂ. ಗುಂತಮಡು ಹಾಗೂ ಸಿಡ್ಲಭಾವಿ, ಹಿರೇಅರಳಳ್ಳಿ ಗ್ರಾ.ಪಂ ಬಿರಲ್‍ದಿನ್ನಿ, ಹಿರೆವಂಕಲಕುಂಟಿ ಗ್ರಾ.ಪಂ ಚಿಕ್ಕವಂಕಲಕುಂಟ, ಗಾಣದಾಳ ಗ್ರಾ.ಪಂ ತಿಪ್ಪನಹಾಳ, ಕುಕನೂರು ತಾಲ್ಲೂಕಿನ ಹಿರೇಬೀಡನಾಳ ಗ್ರಾ.ಪಂ ಚಿಕ್ಕಬೀಡನಾಳು, ಕುಷ್ಟಗಿ ತಾಲ್ಲೂಕಿನ ನಿಲೋಗಲ್ ಗ್ರಾ.ಪಂ ಬಸಾಪುರ, ತುಗ್ಗಲಡೋಣಿ ಗ್ರಾ.ಪಂ ನೀರಲಕೊಪ್ಪ, ತುಮರಿಕೊಪ್ಪ ಗ್ರಾ.ಪಂ ಗೊರಬಿಹಾಳ, ತುಮರಿಕೊಪ್ಪ, ಅಡವಿಭಾವಿ ಗ್ರಾ.ಪಂ ಹನಮಗೇರಿ, ಹಿರೇನಂದಿಹಾಳ ಗ್ರಾ.ಪಂ ಬಿಸನಾಳ್, ಹಿರೇಬನ್ನಿಗೊಳ ಗ್ರಾ.ಪಂ ಚಿಕ್ಕನಂದಿಹಾಳ, ಸಂಗನಾಳ ಗ್ರಾಪಂ 'ಗಂಗನಾಳ, ಗುಮಗೇರಿ ಗ್ರಾ.ಪಂ ನಾಗರಹಾಳ್, ಜುಮಲಾಪುರ ಗ್ರಾ.ಪಂ ಇದ್ಲಾಪುರ, ಸಂಗನಾಳ ಗ್ರಾ.ಪಂ ಮೆಟ್ಟಿನಾಳ್, ಲಿಂಗದಹಳ್ಳಿ ಗ್ರಾ.ಪಂ ವಿರುಪಾಪುರ ಮೇಣದಾಳ ಗ್ರಾ.ಪಂ ಹಿರೇಮುಕರ್ತಿಹಾಳ, ಕನಕಗಿರಿ ತಾಲ್ಲೂಕಿನ ಹುಲಿಹೈದರ್ ಗ್ರಾ.ಪಂ ಲಾಯಾದುಣಸಿ, ಬಸರಿಹಾಳ ಗ್ರಾಪಂ ಬಸರಿಹಾಳ, ಮುಸಲಾಪುರ ಗ್ರಾ.ಪಂ ಪಾರಪುರ, ಹಿರೇಖಡ ಗ್ರಾ.ಪಂ ಹಿರೇಖೆಡ, ಮಲ್ಲಿಗ್ವಾಡ್, ಕಾಟಾಪುರ, ಚಿಕ್ಕಮದಿನಾಳ ಗ್ರಾ.ಪಂ ಹಿರೇಮದಿನಾಳ್, ಗಂಗಾವತಿ ತಾಲ್ಲೂಕಿನ ಕೆಸರಹಟ್ಟಿ ಗ್ರಾ.ಪಂ ಕೆಸಕಿಹಂಚಿನಾಳ್, ಕನಕಗಿರಿ ತಾಲ್ಲೂಕಿನ ಕರಡೋಣ ಗ್ರಾ.ಪಂ ಮಲ್ಲಾಪುರ, ಅಕಲ್‍ಕುಂಪಿ, ವಾಡಿ, ಚಿಕ್ಕಡಣಕನಕಲ್ ಗ್ರಾ.ಪಂ ಚಿಕ್ಕಡಣಕನಕಲ್, ಕಾರಟಗಿ ತಾಲ್ಲೂಕಿನ ಮೈಲಾಪುರ ಗ್ರಾ.ಪಂ ಗುಡೂರು, ಹುಳಿಹಾಳ್ ಗ್ರಾ.ಪಂ ತೊಂಡಿಹಾಳ್, ಮರ್ಲಾನಹಳ್ಳಿ ಗ್ರಾ.ಪಂ ಜುರಟಗಿ, ಬುದಗುಂಪ ಗ್ರಾ.ಪಂ ಹಾಲಸಮುದ್ರ, ಕೊಪ್ಪಳ ತಾಲ್ಲೂಕಿನ ಲೇಬಗೇರಿ ಗ್ರಾ.ಪಂ ಹನುಮನಹಳ್ಳಿ, ಬುದಗುಂಪ ಗ್ರಾ.ಪಂ ಹಳೆಕುಂಟ, ಈ ಎಲ್ಲಾ ಗ್ರಾಮಗಳು ಆಯ್ಕೆಯಾಗಿವೆ.

ಆಸಕ್ತ ಅಭ್ಯರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆದಾರ್ ಕಾರ್ಡ, ವಾಸಸ್ಥಳ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್, ನಿವೇಶನ ದಾಖಲೆಗಳಾದ 9/11ಎ ಅಥವಾ 9/11ಬಿ, ಮನೆಯ ಜಿ.ಪಿ.ಎಸ್ ಛಾಯಾಚಿತ್ರ, ಹೋಂಸ್ಟೇ ನಡೆಸಲು ಗ್ರಾಮ ಪಂಚಾಯತಿಯ ನಿರಾಕ್ಷೇಪಣಾ ಪತ್ರ ಹಾಗೂ ಇತರೆ ಅಗತ್ಯ ದಾಖಲೆಗಳೊಂದಿಗೆ ಜುಲೈ 30 ರೊಳಗಾಗಿ ಕೊಪ್ಪಳ ಜಿಲ್ಲಾಡಳಿತ ಭವನದ 2ನೇ ಮಹಡಿಯಲ್ಲಿನ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಗೆ ಬೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ದೂರವಾಣಿ ಸಂಖ್ಯೆ: 08539-225566ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande