ರಾಯಚೂರು , 25 ಜುಲೈ (ಹಿ.ಸ.) :
ಆ್ಯಂಕರ್ : ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅನುಪಯುಕ್ತ ಸ್ಕ್ರ್ಯಾಪ್‍ಗಳನ್ನು ಅದೇ ಸ್ಥಿತಿಯಲ್ಲಿ ಒಂದೇ ಲಾಟಿನಲ್ಲಿ ವಿಲೇವಾರಿ ಮಾಡಲು ಬಹಿರಂಗ ಹರಾಜು ಮಾಡಲಾಗುತ್ತಿದ್ದು, ಆಸಕ್ತಿ ಇರುವ ಬಿಡ್‍ದಾರರು ಭಾಗವಹಿಸಬಹುದಾಗಿದೆ.
ಆಸಕ್ತರು ಆಗಸ್ಟ್ 20ರ ಬೆಳಿಗ್ಗೆ 12 ಗಂಟೆಗೆ ಸಂಸ್ಥೆಯ ಅವರಣದಲ್ಲಿ ಬಹಿರಂಗ ಹರಾಜು ಹಮ್ಮಿಕೊಳ್ಳಲಾಗಿದೆ. ಬಿಡ್‍ದಾರರು ಆಗಸ್ಟ್ 18ರೊಳಗಾಗಿ 5 ಸಾವಿರ ರೂಪಾಯಿಗಳ ಇಎಮ್‍ಡಿ ಹಣ ಪಾವತಿಸಿ ಹರಾಜಿನಲ್ಲಿ ಬಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಮೊಬೈಲ್ ಸಂಖ್ಯೆ: 9740671796, 9449185499 ಹಾಗೂ 8904784507ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್