ರಾಯಚೂರು, 25 ಜುಲೈ (ಹಿ.ಸ.) :
ಆ್ಯಂಕರ್ : ಒತ್ತಡ ನಿರ್ವಹಣೆ ಕುರಿತು ಅಂತಾರಾಷ್ಟ್ರೀಯ ಪ್ರೇರಣಾದಾಯಕ ಭಾಷಣಕಾರರಾದ ಡಾ.ಇ.ವಿ.ಸ್ವಾಮಿನಾಥನ್ ಅವರಿಂದ ಪ್ರೇರಣಾದಾಯಕ ಉಪನ್ಯಾಸ ಕಾರ್ಯಕ್ರಮವನ್ನು ನಗರದ ಪಂಡಿತ್ ಜಂಬಲದಿನ್ನಿ ರಂಗಮಂದಿರದಲ್ಲಿ ಜುಲೈ 28ರ ಮಧ್ಯಾಹ್ನ 3ಕ್ಕೆ ಏರ್ಪಡಿಸಲಾಗಿದ್ದು, ಜಿಲ್ಲೆಯ ಸರಕಾರಿ ಇಲಾಖೆಯ ಎಲ್ಲಾ ಮುಖ್ಯಸ್ಥರು, ಸಾರ್ವಜನಿಕರು ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ರಾಯಚೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಶಾಖೆಯವರು ಡಾ.ಇ.ವಿ. ಸ್ವಾಮಿನಾಥನ್ ಅವರ ಪ್ರೇರಣಾದಾಯಕ ಉಪನ್ಯಾಸವನ್ನು ರಾಯಚೂರು ಜಿಲ್ಲೆಯ ಸಮಸ್ತ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಏರ್ಪಡಿಸಲು ವಿನಂತಿಸಲಾಗಿದ್ದು, ಅದರಂತೆ ಜಿಲ್ಲೆಯ ಸಮಸ್ತ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯು ಒತ್ತಡ ನಿರ್ವಹಣೆ ಕುರಿತಾದ ಉಪನ್ಯಾಸದಲ್ಲಿ ಭಾಗಿಯಾದಲ್ಲಿ ಜೀವನದಲ್ಲಿ ವೈಯಕ್ತಿಕ ಅಭಿವೃದ್ಧಿ, ಮನೋಸ್ಥೆರ್ಯ ಹಾಗೂ ಸಾರ್ವಜನಿಕ ಸೇವೆಯಲ್ಲಿನ ಪರಿಣಾಮಕಾರಿ ನಾಯಕತ್ವವನ್ನು ಉತ್ತೇಜಿಸಲು ಸಹಕಾರಿ ಆಗಲಿದೆ ಎಂದು ಆಶಿಸಲಾಗಿದ್ದು, ಜಿಲ್ಲೆಯ ಎಲ್ಲಾ ಸರಕಾರಿ ಇಲಾಖೆಯ ಮುಖ್ಯಸ್ಥರು ಸಾರ್ವಜನಿಕರ ಸೇವೆಯಲ್ಲಿ ಯಾವುದೇ ತೊಂದರೆಯಾಗದಂತೆ ಅವಶ್ಯ ಕ್ರಮಗಳನ್ನು ಕೈಗೊಂಡು ಈ ಕಾರ್ಯಾಕ್ರಮದಲ್ಲಿ ತಾವು ಮತ್ತು ತಮ್ಮ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಪಾಲ್ಗೊಳ್ಳುವಂತೆ ಜಿಲ್ಲೆಯ ಸರಕಾರಿ ಇಲಾಖೆಯ ಎಲ್ಲಾ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್