ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ -2026
ಗದಗ, 25 ಜುಲೈ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ 2026 ನೇ ಸಾಲಿನ ಜವಾಹರ ನವೋದಯ ವಿದ್ಯಾಲಯ 6ನೇ ತರಗತಿಗಾಗಿ ಪ್ರವೇಶ ಪರೀಕ್ಷೆಯು ದಿನಾ0ಕ 13.12.2025 ಶನಿವಾರದಂದು ಜಿಲ್ಲೆಯ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ. ಅರ್ಜಿಗಳನ್ನು 29-07-2025.ರ ಒಳಗಾಗಿ ಆನ್ ಲೈನ್ ನಲ್ಲಿ ಸಲ್ಲಿಸಬೇಕಾಗಿರುತ್ತದ
ಪೋಟೋ


ಗದಗ, 25 ಜುಲೈ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ 2026 ನೇ ಸಾಲಿನ ಜವಾಹರ ನವೋದಯ ವಿದ್ಯಾಲಯ 6ನೇ ತರಗತಿಗಾಗಿ ಪ್ರವೇಶ ಪರೀಕ್ಷೆಯು ದಿನಾ0ಕ 13.12.2025 ಶನಿವಾರದಂದು ಜಿಲ್ಲೆಯ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ. ಅರ್ಜಿಗಳನ್ನು 29-07-2025.ರ ಒಳಗಾಗಿ ಆನ್ ಲೈನ್ ನಲ್ಲಿ ಸಲ್ಲಿಸಬೇಕಾಗಿರುತ್ತದೆ.

ವಿದ್ಯಾರ್ಥಿ ಮತ್ತು ಪೋಷಕರು ಗದಗ ಜಿಲ್ಲೆಯ ನಿವಾಸಿಗಳು ಆಗಿರಬೇಕು , ವಿದ್ಯಾರ್ಥಿಯು 2025-26 ನೇ ಸಾಲಿನಲ್ಲಿ 5 ನೇ ತರಗತಿಯಲ್ಲಿ ಓದುತ್ತಿರಬೇಕು. ಕೇಂದ್ರ ಸರ್ಕಾರದ ಮೀಸಲಾತಿಯ ನಿಯಮದಂತೆ ಪ್ರವೇಶ ನೀಡಲಾಗುವದು. ಅರ್ಜಿ ಸಲ್ಲಿಸಿದ ಪ್ರತಿಯನ್ನು ಪಾಲಕರು ತೆಗೆದಿಟ್ಟು ತಮ್ಮ ಮಗು ಆಯ್ಕೆಯಾದಲ್ಲಿ ಅದೇ ಪ್ರತಿಯನ್ನು ದಾಖಲಾತಿ ಸಮಯದಲ್ಲಿ ಹಾಜರು ಪಡಿಸತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಜನವಿ ಗದಗ ಜಿಲ್ಲೆ ಅಥವಾ ಗೆ ಭೇಟಿ ಕೊಡಬಹುದು ಎ0ದು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande