ಬಳ್ಳಾರಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ಉಚ್ಛಾಟನೆಗೆ ಮಹಿಳೆಯರ ಆಗ್ರಹ
ಬಳ್ಳಾರಿ, 24 ಜುಲೈ (ಹಿ.ಸ.) : ಆ್ಯಂಕರ್ : ಬಳ್ಳಾರಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರನ್ನು ಪಕ್ಷದಿಂದ ಉಚ್ಛಾಟಿಸಿ, ಕ್ರಿಯಾಶೀಲರಾಗಿ ಜವಾಬ್ದಾರಿ ನಿರ್ವಹಿಸುವವರನ್ನು ನೇಮಿಸಲು ಮಹಿಳಾ ಕಾಂಗ್ರೆಸ್‍ನ ಮುಖಂಡರು ಆಗ್ರಹಿಸಿದ್ದಾರೆ. ಈ ಕುರಿತು ದಲಿತ ಸಂಘರ್ಷ ಸಮಿತಿಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ
ಬಳ್ಳಾರಿ : ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ಉಚ್ಛಾಟನೆಗೆ ಮಹಿಳೆಯರ ಆಗ್ರಹ


ಬಳ್ಳಾರಿ, 24 ಜುಲೈ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರನ್ನು ಪಕ್ಷದಿಂದ ಉಚ್ಛಾಟಿಸಿ, ಕ್ರಿಯಾಶೀಲರಾಗಿ ಜವಾಬ್ದಾರಿ ನಿರ್ವಹಿಸುವವರನ್ನು ನೇಮಿಸಲು ಮಹಿಳಾ ಕಾಂಗ್ರೆಸ್‍ನ ಮುಖಂಡರು ಆಗ್ರಹಿಸಿದ್ದಾರೆ.

ಈ ಕುರಿತು ದಲಿತ ಸಂಘರ್ಷ ಸಮಿತಿಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ, ಕಾಂಗ್ರೆಸ್ ಕಾರ್ಯಕರ್ತೆ ಶಾಂತಮ್ಮ ಅವರ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಮಹಿಳಾ ಕಾಂಗ್ರೆಸ್ಸಿಗರು, ಎನ್.ಎಂ. ಮಂಜುಳ ಅವರು ಕಾಂಗ್ರೆಸ್ ಪಕ್ಷಕ್ಕಾಗಿ ಶ್ರಮಿಸುತ್ತಿಲ್ಲ, ಮಹಿಳಾ ಸಂಘಟನೆಯಲ್ಲೂ ತೊಡಗಿಕೊಂಡಿಲ್ಲ. ಅದರಲ್ಲೂ, ದಲಿತ ಮಹಿಳಾ ಸದಸ್ಯರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಹಾಲಿ ಇರುವ ದಲಿತ ಮಹಿಳೆಯನ್ನು ಕಚೇರಿ ಪ್ರವೇಶಕ್ಕೂ ಬಿಡುತ್ತಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷದ ಹಿತದೃಷ್ಠಿಯಿಂದ ಎನ್.ಎಂ. ಮಂಜುಳ ಅವರನ್ನು ತಕ್ಷಣವೇ ಪಕ್ಷದಿಂದ ಉಚ್ಛಾಟಿಸಬೇಕು. ಕ್ರಿಯಾಶೀಲ ವ್ಯಕ್ತಿಯನ್ನು ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿ, ಪಕ್ಷವನ್ನು ಸಂಘಟಿಸಬೇಕು ಎಂದು ಅವರು ಕೋರಿದರು.

ಎಂ.ಪಿ. ಕಮಲ, ದಾಕ್ಷಾಯಿಣಿ, ಉಮಾ, ರೋಹಿಣಿ, ದುರ್ಗಮ್ಮ, ಪದ್ಮ ಸೇರಿ ಅನೇಕ ಮಹಿಳಾ ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande