ತೆಲಂಗಾಣ ಮೀಸಲಾತಿ ಶಿಫಾರಸು : ರಾಷ್ಟ್ರಪತಿಗಳ ಅನುಮೋದನೆ ನಿರೀಕ್ಷೆ – ಖರ್ಗೆ
ನವದೆಹಲಿ, 24 ಜುಲೈ (ಹಿ.ಸ.) : ಆ್ಯಂಕರ್ : ತೆಲಂಗಾಣ ಸರ್ಕಾರ ತನ್ನ ಸಾಮಾಜಿಕ-ಆರ್ಥಿಕ ಸಮೀಕ್ಷೆಯ ಆಧಾರದ ಮೇಲೆ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸ್ಥಳೀಯ ಸಂಸ್ಥೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ 42% ಮೀಸಲಾತಿಯನ್ನು ಶಿಫಾರಸು ಮಾಡಿದ್ದು, ಈಗ ರಾಷ್ಟ್ರಪತಿಗಳ ಅನುಮೋದನೆಗಾಗಿ ಕಾಯುತ್ತಿದೆ ಎಂದು ಕಾಂಗ್ರೆ
Kharge


ನವದೆಹಲಿ, 24 ಜುಲೈ (ಹಿ.ಸ.) :

ಆ್ಯಂಕರ್ : ತೆಲಂಗಾಣ ಸರ್ಕಾರ ತನ್ನ ಸಾಮಾಜಿಕ-ಆರ್ಥಿಕ ಸಮೀಕ್ಷೆಯ ಆಧಾರದ ಮೇಲೆ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸ್ಥಳೀಯ ಸಂಸ್ಥೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ 42% ಮೀಸಲಾತಿಯನ್ನು ಶಿಫಾರಸು ಮಾಡಿದ್ದು, ಈಗ ರಾಷ್ಟ್ರಪತಿಗಳ ಅನುಮೋದನೆಗಾಗಿ ಕಾಯುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಈ ಶಿಫಾರಸು ದೇಶಕ್ಕೆ ಮಾದರಿಯಾಗಬಹುದೆಂದು ಅವರು ಎಕ್ಸನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ನಿರ್ಧಾರವನ್ನು ಅವರು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಕಾಂಗ್ರೆಸ್ ಪಕ್ಷದ ಹೊಸ ಚಳವಳಿ ಎಂದಿದ್ದಾರೆ.

ಭಾರತದ ಜನಸಂಖ್ಯೆಯ ಬಹುಪಾಲು ಹೊಂದಿರುವ ಒಬಿಸಿ, ಎಸ್‌ಸಿ, ಎಸ್‌ಟಿ ಮತ್ತು ಇಡಬ್ಲ್ಯೂಎಸ್ ಸಮುದಾಯಗಳು ನ್ಯಾಯಾಂಗ, ಆಡಳಿತ, ಕಾರ್ಪೊರೇಟ್ ಹಾಗೂ ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ಇನ್ನೂ ಪ್ರಾತಿನಿಧ್ಯವಿಲ್ಲದೆ ಉಳಿದಿವೆ. ಉದಾಹರಣೆಗೆ, ಸಂಸತ್ತಿನಲ್ಲಿ ನೀಡಲಾದ ಉತ್ತರದ ಪ್ರಕಾರ, ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಒಬಿಸಿ ಮತ್ತು ಎಸ್‌ಟಿ ಪ್ರಾಧ್ಯಾಪಕರ ಹುದ್ದೆಗಳ 80% ಹಾಗೂ 83% ಕ್ರಮವಾಗಿ ಖಾಲಿ ಇವೆ.

ಜಾತಿಯ ಆಧಾರದ ಮೇಲೆ ದೇಶಾದ್ಯಂತ ಜನಗಣತಿ ನಡೆಸಬೇಕು ಮತ್ತು ಮೀಸಲಾತಿಯ ಮೇಲೆ ಇರುವ 50% ಮಿತಿಯನ್ನು ಹಿಂಪಡೆಯಬೇಕು ಎಂಬ ಬೇಡಿಕೆಯನ್ನು ಅವರು ಪುನರುಚ್ಚರಿಸಿದ್ದಾರೆ

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande