ಸೇನೆ 24 ಗಂಟೆ ಸನ್ನದ್ಧ ಸ್ಥಿತಿಯಲ್ಲಿ ಸೇನೆ : ಸಿಡಿಎಸ್ ಅನಿಲ್ ಚೌಹಾಣ್
ನವದೆಹಲಿ, 25 ಜುಲೈ (ಹಿ.ಸ.) : ಆ್ಯಂಕರ್ : ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಭಾರತದ ಮಿಲಿಟರಿ ಕಾರ್ಯಾಚರಣೆ ''ಆಪರೇಷನ್ ಸಿಂಧೂರ್'' ಮುಂದುವರೆದಿದೆ. ಶತ್ರು ರಾಷ್ಟ್ರದ ಯಾವುದೇ ದುಸ್ಸಾಹಸಕ್ಕೆ ಪ್ರತಿಕ್ರಿಯಿಸಲು ಸೇನೆ ದಿನದ 24 ಗಂಟೆಗಳೂ ಸನ್ನದ್ಧವಾಗಿದೆ ಎಂದು ರಕ್ಷ
Cds


ನವದೆಹಲಿ, 25 ಜುಲೈ (ಹಿ.ಸ.) :

ಆ್ಯಂಕರ್ : ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಭಾರತದ ಮಿಲಿಟರಿ ಕಾರ್ಯಾಚರಣೆ 'ಆಪರೇಷನ್ ಸಿಂಧೂರ್' ಮುಂದುವರೆದಿದೆ. ಶತ್ರು ರಾಷ್ಟ್ರದ ಯಾವುದೇ ದುಸ್ಸಾಹಸಕ್ಕೆ ಪ್ರತಿಕ್ರಿಯಿಸಲು ಸೇನೆ ದಿನದ 24 ಗಂಟೆಗಳೂ ಸನ್ನದ್ಧವಾಗಿದೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಅನಿಲ್ ಚೌಹಾಣ್ ಹೇಳಿದರು.

ನವದೆಹಲಿಯಲ್ಲಿ ನಡೆದ ಬಾಹ್ಯಾಕಾಶ ಶಕ್ತಿ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪ್ರಸ್ತುತ ಯುದ್ಧ ತಂತ್ರ, ಕಾರ್ಯಾಚರಣೆ ಮತ್ತು ಕಾರ್ಯತಂತ್ರಗಳ ಏಕೀಕರಣದ ಅಗತ್ಯವಿದೆ ಎಂದರು. ಸೇನೆಯು ಶಸ್ತ್ರ(ಯುದ್ಧ ಕಲೆ) ಹಾಗೂ ಶಾಸ್ತ್ರ (ಜ್ಞಾನ) ಎರಡರಲ್ಲೂ ಪರಿಣತಿ ಹೊಂದಿದ್ದು, ತಂತ್ರಜ್ಞಾನಾಧಾರಿತ ಮಿಲಿಟರಿ ಯುದ್ಧದ 'ಮೂರನೇ ಕ್ರಾಂತಿ'ಯ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande