ನವದೆಹಲಿ, 25 ಜುಲೈ (ಹಿ.ಸ.) :
ಆ್ಯಂಕರ್ : ಉಪ ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿ ರಾಜ್ಯ ಸಭೆಯ ಪ್ರಧಾನ ಕಾರ್ಯದರ್ಶಿ ಪಿ.ಸಿ. ಮೋದಿ ಅವರನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಜೊತೆಗೆ, ಗರಿಮಾ ಜೈನ್ (ಜಂಟಿ ಕಾರ್ಯದರ್ಶಿ) ಮತ್ತು ವಿಜಯ್ ಕುಮಾರ್ (ರಾಜ್ಯ ಸಭೆ ಕಾರ್ಯದರ್ಶಿ) ಅವರನ್ನು ಸಹಾಯಕ ಚುನಾವಣಾ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ.
ಚುನಾವಣೆ ಆಯೋಗದ ಪ್ರಕಾರ, ಉಪ ಸಭಾಪತಿ ಚುನಾವಣೆಯನ್ನು 1952ರ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ಕಾಯ್ದೆ ಹಾಗೂ 1974ರ ನಿಯಮಾವಳಿ ಪ್ರಕಾರ ನಡೆಸಲಾಗುತ್ತದೆ. ಸಂಪ್ರದಾಯದಂತೆ, ಹಿಂದಿನ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಲೋಕ ಸಭೆಯ ಪ್ರಧಾನ ಕಾರ್ಯದರ್ಶಿ ಚುನಾವಣಾ ಅಧಿಕಾರಿಯಾಗಿದ್ದರೆ, ಈ ಬಾರಿ ರಾಜ್ಯ ಸಭೆಯ ಪ್ರಧಾನ ಕಾರ್ಯದರ್ಶಿಗೆ ಆ ಹೊಣೆ ನೀಡಲಾಗಿದೆ.
ಇತ್ತೀಚೆಗಷ್ಟೇ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರು ಅನಾರೋಗ್ಯದ ಕಾರಣ ಹುದ್ದೆಯಿಂದ ರಾಜೀನಾಮೆ ನೀಡಿದ್ದು, ಅದರ ಬೆನ್ನಲ್ಲೇ ಈ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa