ಟಣಕನಕಲ್ : ನಾಳೆ ರಾಷ್ಟ್ರೀಯ ಶಿಶಿಕ್ಷು ಮೇಳ
ಕೊಪ್ಪಳ, 24 ಜುಲೈ (ಹಿ.ಸ.) : ಆ್ಯಂಕರ್ : ತಾಲ್ಲೂಕಿನ ಟಣಕನಕಲ್ ಗ್ರಾಮದಲ್ಲಿರುವ ಕೊಪ್ಪಳ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜುಲೈ 25ರಂದು ಬೆಳಿಗ್ಗೆ 9 ಗಂಟೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶಿಕ್ಷು ಮೇಳ (ಪಿ.ಎಂ.ಎನ್.ಎ.ಎಂ)ವನ್ನು ಏರ್ಪಡಿಸಲಾಗಿದೆ. ಈ ಮೇಳದಲ್ಲಿ ಬೃಹತ್ ಕೈಗಾರಿಕೆ ಗಳಾ
ಟಣಕನಕಲ್ : ನಾಳೆ ರಾಷ್ಟ್ರೀಯ ಶಿಶಿಕ್ಷು ಮೇಳ


ಕೊಪ್ಪಳ, 24 ಜುಲೈ (ಹಿ.ಸ.) :

ಆ್ಯಂಕರ್ : ತಾಲ್ಲೂಕಿನ ಟಣಕನಕಲ್ ಗ್ರಾಮದಲ್ಲಿರುವ ಕೊಪ್ಪಳ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜುಲೈ 25ರಂದು ಬೆಳಿಗ್ಗೆ 9 ಗಂಟೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶಿಕ್ಷು ಮೇಳ (ಪಿ.ಎಂ.ಎನ್.ಎ.ಎಂ)ವನ್ನು ಏರ್ಪಡಿಸಲಾಗಿದೆ.

ಈ ಮೇಳದಲ್ಲಿ ಬೃಹತ್ ಕೈಗಾರಿಕೆ ಗಳಾದ ತೋರಣಗಲ್-ಬಳ್ಳಾರಿಯ ಮೇ.ಜಿಂದಾಲ್ ಸ್ಟೀಲ್ ವಕ್ರ್ಸ ಲಿಮಿಟೆಡ್, ಹೈದರಾಬಾದ್ ಮೆ. ಎಂ.ಆರ್.ಎಫ್ ಟೈರ್ಸ್, ಗಿಣಿಗೇರ (ಬೇವಿನಹಳ್ಳಿ)-ಕೊಪ್ಪಳದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್, ಡಿಟಿಡಿಸಿ ಎಕ್ಸ್‍ಪ್ರೇಸ್ ಲೀ. ಸಮೂಹ, ಬೆಂಗಳೂರು ಕೈಗಾರಿಕೆಗಳು ಹಾಗೂ ಕೊಪ್ಪಳ ಮೂಲದ ಇನ್ನಿತರೆ ಕೈಗಾರಿಕೆಗಳು ಭಾಗವಹಿಸುತ್ತಿದ್ದು, ಐಟಿಐ ಪಾಸ್ ಆದ ಹಾಗೂ ಪ್ರಸ್ತುತ ಎರಡನೇಯ ವರ್ಷದಲ್ಲಿ ಎಲೆಕ್ಟ್ರಿಷಿಯನ್, ಫಿಟ್ಟರ್, ಟರ್ನರ್, ಮೆಕಾನಿಕ್ ಮೋಟರ್ ವಹಿಕಲ್, ಮೆಕಾನಿಕ್ ಡಿಸೈಲ್, ಟೂಲ್ಸ್ & ಡೈ ಮೇಕಿಂಗ್ & ವೇಲ್ಡರ್, ಮಷಿನಿಸ್ಟ್ ವೃತ್ತಿಗಳ ಅಭ್ಯರ್ಥಿಗಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶಿಕ್ಷು ಮೇಳದಲ್ಲಿ ಶಿಶಿಕ್ಷು ತರಬೇತಿಗಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಆಸಕ್ತ 18 ರಿಂದ 23 ವರ್ಷಗಳ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ, ಫೆÇೀಟೋ, ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲಾತಿಗಳು ಹಾಗೂ 2 ಸೆಟ್ ಝರಾಕ್ಸ್ ಪ್ರತಿಗಳೊಂದಿಗೆ ಮೇಳದಲ್ಲಿನ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೊಪ್ಪಳದ ಟಣಕನಕಲ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರ ದೂರವಾಣಿ ಸಂಖ್ಯೆ : 9449134905, 8660977220, 9008536895, 9448813422, 9742532353, 9945577155, 9945672606ಗೆ ಸಂಪರ್ಕಿಸಬಹುದು ಎಂದು ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande