ಜಿಲ್ಲಾಸ್ಪತ್ರೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಭೇಟಿ
ವಿಜಯಪುರ, 24 ಜುಲೈ (ಹಿ.ಸ.) : ಆ್ಯಂಕರ್ : ಬಾಗಲಕೋಟೆ ಜಿಲ್ಲಾಸ್ಪತ್ರೆ ಒಂದಿಲ್ಲೊಂದು ಸಮಸ್ಯೆ,ಅವಾಂತರದಿಂದ ಸುದ್ದಿಯಲ್ಲಿರುತ್ತದೆ.ಈ ಹಿನ್ನೆಲೆಯಲ್ಲಿ ಗುರುವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶಶಿಧರ ಕೋಸಂಬೆ ನೇತೃತ್ವದಲ್ಲಿ ಆಯೋಗ ಭೇಟಿ ನೀಡಿತು. ಬಾಲಕೋಟೆ ಜಿಲ್ಲಾಸ್ಪತ್ರೆ ದುಸ್ಥಿತಿ ಕ
ಜಿಲ್ಲಾಸ್ಪತ್ರೆ


ವಿಜಯಪುರ, 24 ಜುಲೈ (ಹಿ.ಸ.) :

ಆ್ಯಂಕರ್ : ಬಾಗಲಕೋಟೆ ಜಿಲ್ಲಾಸ್ಪತ್ರೆ ಒಂದಿಲ್ಲೊಂದು ಸಮಸ್ಯೆ,ಅವಾಂತರದಿಂದ ಸುದ್ದಿಯಲ್ಲಿರುತ್ತದೆ.ಈ ಹಿನ್ನೆಲೆಯಲ್ಲಿ ಗುರುವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶಶಿಧರ ಕೋಸಂಬೆ ನೇತೃತ್ವದಲ್ಲಿ ಆಯೋಗ ಭೇಟಿ ನೀಡಿತು.

ಬಾಲಕೋಟೆ ಜಿಲ್ಲಾಸ್ಪತ್ರೆ ದುಸ್ಥಿತಿ ಕಂಡು ವೈದ್ಯರನ್ನ ತರಾಟೆಗೆ ತೆಗೆದುಕೊಂಡರು. ನವಜಾತ ಶಿಶುಗಳ ವಿಭಾಗದ ಅವ್ಯವಸ್ಥೆ ಕಂಡು ತೀವ್ರ ಅಸಮಾಧಾನ ಹೊರಹಾಕಿದ ಸದಸ್ಯರು, ಜಿಲ್ಲಾಸ್ಪತ್ರೆ ವೈದ್ಯರಿಗೆ ನೋಟಿಸ್ ನೀಡಿ ಲಿಖಿತ ಉತ್ತರ ನೀಡುವಂತೆ ಸೂಚನೆ ನೀಡಿದರು.

ನಂತರ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಬಾಣಂತಿಯರ ಸಮಸ್ಯೆ ಆಲಿಸಿದ ಆಯೋಗದ ಸದಸ್ಯರು ಕೂಡಲೇ ಸೂಕ್ತ ಸೌಲಭ್ಯ ನೀಡುವಂತೆ ವೈದ್ಯ ಸಿಬ್ಬಂದಿಗೆ ಸೂಚನೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande