ಮೂರು ಕೋಟಿ ರೂ ವೆಚ್ವದಲ್ಲಿ ರಾಮಸಂದ್ರ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ
ಮೂರು ಕೋಟಿ ರೂ ವೆಚ್ವದಲ್ಲಿ ರಾಮಸಂದ್ರ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ
ಚಿತ್ರ : ಮೂರು ಕೋಟಿ ರೂ ವೆಚ್ವದಲ್ಲಿ ರಾಮಸಂದ್ರ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನಡೆಸಲಾಯಿತು.


ಕೋಲಾರ, ೨೪ ಜುಲೈ (ಹಿ.ಸ.) :

ಆ್ಯಂಕರ್ : ತಾಲ್ಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಸಂದ್ರ ಗ್ರಾಮದಿಂದ ಮಾಲೂರು ಗಡಿಯವರೆಗೆ ಹಾದು ಹೋಗುವ ರಸ್ತೆ ತುಂಬಾ ಹದಗೆಟ್ಟು ವಾಹನ ಸವಾರರು ಓಡಾಡಲು ಕಷ್ಷವಾಗಿತ್ತು ರಾಮಸಂದ್ರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಶಾಸಕ ಕೊತ್ತೂರು ಜಿ.ಮಂಜುನಾಥ್ ಅವರಿಗೆ ಮನವಿ ಮಾಡಿದ್ದು ಗುರುವಾರ ಸುಮಾರು ೩ ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಮಾಡಲಾಯಿತು,

ಅನುದಾನ ಬಿಡುಗಡೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್, ಶಾಸಕ ಕೊತ್ತೂರು ಜಿ.ಮಂಜುನಾಥ ಹಾಗೂ ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ಕುಮಾರ್, ನಸೀರ್ ಅಹಮದ್ ಅವರ ಒತ್ತಾಸೆಯ ಮೇರೆಗೆ ಗುರುವಾರ ನರಸಾಪುರ ಹೋಬಳಿ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ಮಾಡಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ರಾಮಸಂದ್ರ ಗ್ರಾಮಸ್ಥರು ಹರ್ಷವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಪಿಡಿಒ ಸಂಪರಾಜು ಮುಖಂಡರಾದ ವೆಂಕಟಸ್ವಾಮಿ, ಖಾಜಿಕಲ್ಲಹಳ್ಳಿ ಮುನಿರಾಜು, ಬೆಳ್ಳೂರು ಅಶ್ವಥ್, ವೀರೇಂದ್ರ ಪಾಟೀಲ್, ಶಿವಕುಮಾರ್.ಎನ್, ಕೋಟೆ ಶ್ರೀನಿವಾಸ್, ರುದ್ರೇಶ್, ಪ್ರಸನ್ನಕುಮಾರ್, ಶಿವರುದ್ರಯ್ಯ.ಪಿ, ಜಾಲಿ ಭಾನು, ನರಸಿಂಹ, ನಾಗರಾಜು, ಸಂತೋಷ್, ರಾಜಣ್ಣ, ಮಂಜು ಮುಂತಾದವರು ಇದ್ದರು.

ಚಿತ್ರ : ಮೂರು ಕೋಟಿ ರೂ ವೆಚ್ವದಲ್ಲಿ ರಾಮಸಂದ್ರ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನಡೆಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande