ಹೊಸ ಪ್ರಯೋಗದ ಹೆಗ್ಗಳಿಕೆಗೆ ಪಾತ್ರವಾದ ರಾಯಚೂರು ಮಹಾನಗರ ಪಾಲಿಕೆ
ರಾಯಚೂರು, 24 ಜುಲೈ (ಹಿ.ಸ.) : ಆ್ಯಂಕರ್ : ಮ್ಯಾನ್‍ಹೋಲ್‍ಗಳನ್ನು ಸ್ವಚ್ಛಗೊಳಿಸಲು ರೂಪಿಸಿರುವ ವಿಶ್ವದ ಮೊದಲ ರೋಬೋಟಿಕ್ ಸ್ಕ್ಯಾವೆಂಜರ್ ಬ್ಯಾಂಡಿಕೂಟ್ ಯಂತ್ರದ ಬಳಕೆಗೆ ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ಚಾಲನೆ ನೀಡಿದ್ದಾರೆ. ನಗರದ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ
ಹೊಸ ಪ್ರಯೋಗದ ಹೆಗ್ಗಳಿಕೆಗೆ ಪಾತ್ರವಾದ ರಾಯಚೂರು  ಮಹಾನಗರ ಪಾಲಿಕೆ


ಹೊಸ ಪ್ರಯೋಗದ ಹೆಗ್ಗಳಿಕೆಗೆ ಪಾತ್ರವಾದ ರಾಯಚೂರು  ಮಹಾನಗರ ಪಾಲಿಕೆ


ಹೊಸ ಪ್ರಯೋಗದ ಹೆಗ್ಗಳಿಕೆಗೆ ಪಾತ್ರವಾದ ರಾಯಚೂರು  ಮಹಾನಗರ ಪಾಲಿಕೆ


ರಾಯಚೂರು, 24 ಜುಲೈ (ಹಿ.ಸ.) :

ಆ್ಯಂಕರ್ : ಮ್ಯಾನ್‍ಹೋಲ್‍ಗಳನ್ನು ಸ್ವಚ್ಛಗೊಳಿಸಲು ರೂಪಿಸಿರುವ ವಿಶ್ವದ ಮೊದಲ ರೋಬೋಟಿಕ್ ಸ್ಕ್ಯಾವೆಂಜರ್ ಬ್ಯಾಂಡಿಕೂಟ್ ಯಂತ್ರದ ಬಳಕೆಗೆ ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ಚಾಲನೆ ನೀಡಿದ್ದಾರೆ.

ನಗರದ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನ ಪಾಲಿಕೆಯ ಕಚೇರಿ ಮುಂದಿನ ರಸ್ತೆಯಲ್ಲಿನ ಮ್ಯಾನ್‍ಹೋಲ್‍ನ್ನು ನೂತನ ರೋಬೋಟಿಕ್ ಸ್ಕ್ಯಾವೆಂಜರ್ ಯಂತ್ರದ ಮೂಲಕ ಶುಚಿಗೊಳಿಸುವುದನ್ನು ಖುದ್ದು ವೀಕ್ಷಣೆ ನಡೆಸಿ ಮಾತನಾಡಿದ ಆಯುಕ್ತರು, ಕರ್ನಾಟಕ ರಾಜ್ಯದಲ್ಲಿಯೇ ಮೊಟ್ಟಮೊದಲ ಬಾರಿ ಈ ನೂತನ ಯಂತ್ರವನ್ನು ಬಳಕೆಗೆ ತಂದ ಹೆಗ್ಗಳಿಕೆಗೆ ರಾಯಚೂರ ಮಹಾನಗರ ಪಾಲಿಕೆಯು ಪಾತ್ರವಾಗಿದೆ. ಸಾರ್ವಜನಿಕ ಸೇವಾ ಕಾರ್ಯಗಳನ್ನು ಸುಧಾರಿಸುವಲ್ಲಿ ಹಾಗೂ ಸುರಕ್ಷತೆಯನ್ನು ಖಚಿತಪಡಿಸುವಲ್ಲಿ ಈ ಯಂತ್ರವು ಪ್ರಮುಖ ಪಾತ್ರ ವಹಿಸುತ್ತದೆ. ಮತ್ತು ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಎತ್ತಿ ಹಿಡಿಯುವಲ್ಲಿ ಹೊಸ ಯಂತ್ರವನ್ನು ಬಳಸಿಕೊಂಡ ಕೀರ್ತಿಗೆ ರಾಯಚೂರು ಮಹಾನಗರ ಪಾಲಿಕೆಯು ಪಾತ್ರವಾಗಿದೆ ಎಂದು ಹೇಳಲು ತಮಗೆ ಸಂತಸವಾಗುತ್ತಿದೆ ಎಂದು ತಿಳಿಸಿದರು.

ರಾಯಚೂರನ್ನು ಸ್ವಚ್ಛ, ಸುರಕ್ಷಿತ ಮತ್ತು ಸ್ಮಾರ್ಟ್ ನಗರ ಮಾಡಬೇಕು ಎಂಬುದು ನಮ್ಮ ಗುರಿಯಾಗಿದೆ. ಈ ದಿಶೆಯಲ್ಲಿ ನಾವು ಹೊಸ ಹೊಸ ಪ್ರಯೋಗ ಮಾಡುತ್ತಿದ್ದೇವೆ. ಹಸ್ತಚಾಲಿತ ಸ್ಕ್ಯಾವೆಂಜಿಂಗ್ ದುರಾವಸ್ಥೆಯನ್ನು ನಿರ್ಮೂಲನೆ ಮಾಡುವುದು ಮತ್ತು ಕಾರ್ಮಿಕರ ಜೀವ ರಕ್ಷಣೆ ಮಾಡಬೇಕು ಎಂಬುದಕ್ಕೆ ಮಹಾನಗರ ಪಾಲಿಕೆಯು ಬದ್ಧವಾಗಿದೆ. ಈ ಬ್ಯಾಂಡಿಕೂಟ್ ಬಳಕೆಯ ಮೂಲಕ ರಾಯಚೂರು ನಗರವು ಹೊಸ ನಾವೀನ್ಯತೆ ಹೊಂದಿ ನಮ್ಮ ರಾಜ್ಯದ ಹಾಗೂ ದೇಶದ ಬೇರೆ ಬೇರೆ ನಗರಗಳಿಗೆ ಮಾದರಿಯಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದರು.

ಬ್ಯಾಂಡಿಕೂಟ್ ಕೇವಲ ಒಂದು ಯಂತ್ರವಲ್ಲ; ಇದು ಪ್ರಗತಿ, ಘನತೆ ಮತ್ತು ಸುರಕ್ಷತೆಯನ್ನು ಪ್ರತಿನಿಧಿಸುತ್ತದೆ. ಜವಾಬ್ದಾರಿಯುತ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ನೈರ್ಮಲ್ಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭಾರತೀಯ ಡೀಪ್‍ಟೆಕ್ ಕಂಪನಿ ಜೆನ್‍ರೋಬೋಟಿಕ್ಸ್ ಅಭಿವೃದ್ಧಿಪಡಿಸಿದ ಬ್ಯಾಂಡಿಕೂಟ್ ಯಂತ್ರವು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಮುಂದುವರಿದ ಮತ್ತು ಪರಿಣಾಮಕಾರಿಯಾದ ಯಂತ್ರವಾಗಿದೆ. ಮಾನವ ಚಲನೆಯನ್ನು ಅನುಕರಿಸುವ ಈ ರೋಬೋಟಿಕ್ ಯಂತ್ರವು ತೋಳು ಬಳಸಿ ಮಾನವರಂತೆ ಕಾರ್ಯ ನಿರ್ವಹಿಸುತ್ತದೆ. ಮಾನವ ಪ್ರವೇಶವಿಲ್ಲದೆ ಮ್ಯಾನ್‍ಹೋಲ್‍ಗಳನ್ನು ನಿಖರವಾಗಿ ಮತ್ತು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸಲು ಅನುವು ಮಾಡಿಕೊಡುತ್ತದೆ. ಅಪಾಯಕಾರಿ ಅನಿಲಗಳನ್ನು ಪತ್ತೆಹಚ್ಚಲು ವಿಷಕಾರಿ ಅನಿಲ ಸಂವೇಧಕಗಳು ಮತ್ತು ಕಡಿಮೆ-ಬೆಳಕಿನ ಪರಿಸ್ಥಿತಿಗಳಲ್ಲಿ ಕಾರ್ಯಾಚರಣೆಗಳಿಗಾಗಿ ಮಹತ್ವದ ಕ್ಯಾಮೆರಾಗಳನ್ನು ಈ ರೋಬೋಟ್ ಹೊಂದಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪಾಲಿಕೆಯ ಪ್ರಭಾರ ಅಧ್ಯಕ್ಷರಾದ ಸಾಜೀದ್ ಸಮೀರ್ ಹಾಗು ಪಾಲಿಕೆಯ ಸದಸ್ಯರು ಹಾಗೂ ಪಾಲಿಕೆಯ ವಿಭಾಗ ಅಧಿಕಾರಿ, ಸಿಬ್ಬಂದಿ ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande