ಜುಲೈ 31 ರವರೆಗೆ ಪ್ರಧಾನ ಮಂತ್ರಿ ಮಾತೃ ವಂದನಾ ವಿಶೇಷ ನೋಂದಣಿ ಅಭಿಯಾನ
ರಾಯಚೂರು, 24 ಜುಲೈ (ಹಿ.ಸ.) : ಆ್ಯಂಕರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ವಿಶೇಷ ಅರ್ಹ ಫಲಾನುಭವಿಗಳ ನೋಂದಣಿ ಅಭಿಯಾನವನ್ನು ಜುಲೈ 31ರವರೆಗೂ ಹಮ್ಮಿಕೊಳ್ಳಲಾಗಿದೆ. ಯೋಜನೆಯಡಿ ಮೊದಲ ಪ್ರಸವದ ಗರ್ಭಿಣಿ ಮತ್ತು ಬಾಣಂತಿಯರಿಗೆ 5000 ರೂ.ಗಳು ಎರಡು
ಜುಲೈ 31 ರವರೆಗೆ ಪ್ರಧಾನ ಮಂತ್ರಿ ಮಾತೃ ವಂದನಾ ವಿಶೇಷ ನೋಂದಣಿ ಅಭಿಯಾನ


ರಾಯಚೂರು, 24 ಜುಲೈ (ಹಿ.ಸ.) :

ಆ್ಯಂಕರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ವಿಶೇಷ ಅರ್ಹ ಫಲಾನುಭವಿಗಳ ನೋಂದಣಿ ಅಭಿಯಾನವನ್ನು ಜುಲೈ 31ರವರೆಗೂ ಹಮ್ಮಿಕೊಳ್ಳಲಾಗಿದೆ.

ಯೋಜನೆಯಡಿ ಮೊದಲ ಪ್ರಸವದ ಗರ್ಭಿಣಿ ಮತ್ತು ಬಾಣಂತಿಯರಿಗೆ 5000 ರೂ.ಗಳು ಎರಡು ಕಂತುಗಳಲ್ಲಿ ನೀಡಲಾಗುತ್ತಿದೆ. ಎರಡನೇ ಪ್ರಸವದಲ್ಲಿ (ಹೆಣ್ಣು ಮಗು ಜನಿಸಿದಲಿ ಮಾತ್ರ) ಬಾಣಂತಿ ತಾಯಂದಿರಿಗೆ 6000 ರೂ.ಗಳು ಒಂದೇ ಕಂತಿನಲ್ಲಿ ನೀಡಲಾಗುತ್ತಿದೆ.

ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಫಲಾನುಭವಿಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರು ಮತ್ತು ಸರಕಾರಕ್ಕೆ ತೆರಿಗೆ ಕಟ್ಟುವವರು ಹೊರತುಪಡಿಸಿ ಉಳಿದೆಲ್ಲ ಅರ್ಹರಾಗಿರುತ್ತಾರೆ.

ಹಾಗೂ ಈ ಯೋಜನೆಯ ಮುಖ್ಯ ಉದ್ದೇಶ ಗರ್ಭಿಣಿ ಮತ್ತು ಬಾಣಂತಿ ಸಮಯದಲ್ಲಿ ವೇತನ ನಷ್ಟ ಬರಿಸಿ ಆದಷ್ಟು ವಿಶ್ರಾಂತಿ ಪಡೆದುಕೊಳ್ಳುವುದು, ಪೌಷ್ಟಿಕ ಆಹಾರ ಸೇವನೆ ಮಾಡಲು ನೀಡಲಾಗುತ್ತಿದ್ದು. ಈ ಯೋಜನೆಯ ಹೆಚ್ಚಿನ ಮಾಹಿತಿ ಪಡೆಯಲು ತಮ್ಮ ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನವೀನ್ ಕುಮಾರ್. ಯು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande