ಗದಗ, 24 ಜುಲೈ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಲಕ್ಷ್ಮೀಶ್ವರ ಪಟ್ಟಣದ ಪಿಎಸ್‌ಬಿಡಿ ಬಾಲಕಿಯರ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ ಕಬ್ಬಿಣಾಂಶದ ಮಾತ್ರೆ ಮತ್ತು ಶುಚಿ ಸ್ಯಾನಿಟರಿ ನ್ಯಾಪ್‌ಕಿನ್ಸ್ ನೀಡಲಾಯಿತು.
ಈ ವೇಳೆ ಡಾ. ಮಂಜುನಾಥ ಮರಿಗೌಡ್ರ ಮಾತನಾಡಿ, ವಿದ್ಯಾರ್ಥಿಗಳಿಗೆ ಹಾಗೂ ಶಾಲೆ ಬಿಟ್ಟ ಕಿಶೋರಿಯರಿಗೆ 6-10 ವರ್ಷದ ಮಕ್ಕಳಿಗೆ ಗುಲಾಬಿ ಮಾತ್ರೆ ನೀಡಲಾಗುತ್ತದೆ. 11-19 ವರ್ಷದ ಮಕ್ಕಳಿಗೆ ನೀಲಿ ಮಾತ್ರೆ ನೀಡಲಾಗುತ್ತದೆ. ಮಕ್ಕಳಲ್ಲಿ ರಕ್ತಹೀನತೆಯನ್ನು ತಡೆಗಟ್ಟುವ ಉದ್ದೇಶದಿಂದ ವಾರಕ್ಕೊಂದು ಕಬ್ಬಿಣಾಂಶದ ಮಾತ್ರೆ ನೀಡಲಾಗುತ್ತದೆ.
ಹದಿಹರೆಯದವರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಮುಖ್ಯವಾಗಿ ರಕ್ತಹೀನತೆ, ಪೌಷ್ಟಿಕ ಆಹಾರದ ಕೊರತೆ, ಋತುಚಕ್ರ ಸಂಬಂಧಿ ಸಮಸ್ಯೆಗಳು ಹಾಗೂ ವೈಯಕ್ತಿಕ ಅನಾರೋಗ್ಯ ಮೊದಲಾದವುಗಳು ಅವರನ್ನು ಬಲಹೀನರನ್ನಾಗಿ ಮಾಡುತ್ತವೆ. ಇಂತಹ ಸಮಸ್ಯೆಗಳಿಂದ ಮುಕ್ತರಾಗಲು ವೈದ್ಯರ ಸಲಹೆ, ಆರೋಗ್ಯಪೂರ್ಣ ನಡಾವಳಿಕೆ ಮತ್ತು ಉತ್ತಮ ಆಹಾರ ಸೇವನೆ ಮುಖ್ಯ ಎಂದರು.
ಆಪ್ತ ಸಮಾಲೋಚಕ ಫಕ್ಕಿರೇಶ ಜಂತ್ರಿ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಹದಿಹರೆಯದವರಿಗೆ ಆರೋಗ್ಯ ಮತ್ತು ಜೀವನ ಶೈಲಿಯ ಶಿಕ್ಷಣ ಅಗತ್ಯವಾಗಿದೆ ಎಂದರು. ಮುಖ್ಯೋಪಾಧ್ಯಾಯ ಜೆ.ಡಿ. ಲಮಾಣಿ, ಶಿಕ್ಷಕರಾದ ಎಂ.ಸಿ. ಹಿರೇಮಠ, ಶೀಲಾ ತಳವಾರ, ಎಸ್.ಎಸ್. ಮಠದ, ಎಸ್.ಎಂ. ಹಾದಿಮನಿ, ಆರ್.ಸಿ. ಉಮಚಗಿ, ಪಿ.ಎಲ್. ಪಾಟೀಲ, ಶ್ವೇತಾ ಅಂಬಲಿ, ಕವಿತಾ ಘಂಟಿ, ಸುಜಾತಾ ಮಾಗಡಿ ಇದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP