ಇಂಫಾಲ, 24 ಜುಲೈ (ಹಿ.ಸ.) :
ಆ್ಯಂಕರ್ : ಮಣಿಪುರದಲ್ಲಿ ಭದ್ರತಾ ಪಡೆಗಳು ಸತತ ಕಾರ್ಯಾಚರಣೆಯಡಿ ನಿಷೇಧಿತ ಉಗ್ರ ಸಂಘಟನೆಗಳ ಸದಸ್ಯರನ್ನು ಬಂಧಿಸಿವೆ.
ಕೆಸಿಪಿ, ಪ್ರೆಪಕ್, ಪಿಎಲ್‌ಎ, ಆರ್‌ಪಿಎಫ್ ಹಾಗೂ ಯುಕೆಎನ್‌ಎ ಸಂಘಟನೆಗಳಿಗೆ ಸೇರಿದ ಈ ಉಗ್ರರು ಸುಲಿಗೆ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದರು.
ಬಂಧಿತರಿಂದ ಡಿಮ್ಯಾಂಡ್ ನೋಟುಗಳು, ಮೊಬೈಲ್‌ಗಳು ಮತ್ತು ಇತರ ಸಾಕ್ಷ್ಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಶಾಂತಿಯನ್ನು ಕಾಪಾಡಲು ಕಾರ್ಯಾಚರಣೆ ಮುಂದುವರಿದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa