ಸೂಕ್ತ ಪರಿಹಾರ ನೀಡದಿದ್ದಲ್ಲಿ ಪ್ರತಿಭಟನೆ : ಕುಡತಿನಿ ಭೂ ಸಂತ್ರಸ್ತರು
ಬಳ್ಳಾರಿ, 24 ಜುಲೈ (ಹಿ.ಸ.) : ಆ್ಯಂಕರ್ : ಕುಡತಿನಿ, ಹರಗಿನಡೋಣಿ, ಸಿದ್ದಮ್ಮನಹಳ್ಳಿ ಸೇರಿ ತಾಲೂಕಿನ ಏಳು ಗ್ರಾಮಗಳ 12,500 ಎಕರೆ ಜಮೀನನ್ನು ಸರ್ಕಾರ ಕೆಐಎಡಿಬಿಯ ಮೂಲಕ ರೈತರಿಂದ ಬಲವಂತವಾಗಿ ಸ್ವಾಧೀನ ಮಾಡಿಕೊಂಡಿದ್ದು ನ್ಯಾಯಯುತವಾದ ಭೂ ಬೆಲೆಯನ್ನು ಸರ್ಕಾರ ಪಾವತಿಸದಿದ್ದಲ್ಲಿ ಫ್ರೀಡಂಪಾರ್ಕ
ಸೂಕ್ತ ಪರಿಹಾರ ನೀಡದಿದ್ದಲ್ಲಿ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ : ಕುಡತಿನಿ ಭೂ ಸಂತ್ರಸ್ತರು


ಬಳ್ಳಾರಿ, 24 ಜುಲೈ (ಹಿ.ಸ.) :

ಆ್ಯಂಕರ್ : ಕುಡತಿನಿ, ಹರಗಿನಡೋಣಿ, ಸಿದ್ದಮ್ಮನಹಳ್ಳಿ ಸೇರಿ ತಾಲೂಕಿನ ಏಳು ಗ್ರಾಮಗಳ 12,500 ಎಕರೆ ಜಮೀನನ್ನು ಸರ್ಕಾರ ಕೆಐಎಡಿಬಿಯ ಮೂಲಕ ರೈತರಿಂದ ಬಲವಂತವಾಗಿ ಸ್ವಾಧೀನ ಮಾಡಿಕೊಂಡಿದ್ದು ನ್ಯಾಯಯುತವಾದ ಭೂ ಬೆಲೆಯನ್ನು ಸರ್ಕಾರ ಪಾವತಿಸದಿದ್ದಲ್ಲಿ ಫ್ರೀಡಂಪಾರ್ಕ್‍ನಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಭೂ ಸಂತ್ರಸ್ತ ಸಂಘಟನೆಯ ಗೌರವಾಧ್ಯಕ್ಷ ಯು. ಬಸವರಾಜ್ ಅವರು ಆಗ್ರಹಿಸಿದ್ದಾರೆ.

ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮತನಾಡಿದ ಯು. ಬಸವರಾಜ್ ಅವರು, ಬ್ರಹ್ಮಣಿ, ಮಿತ್ತಲ್, ಎನ್‍ಎಂಡಿಸಿ ಸೇರಿ ಮೂರು ಕಂಪನಿಗಳು ಅತ್ಯಂತ ಕಡಿಮೆ ಬೆಲೆಗೆ ರೈತರಿಂದ ಬಲವಂತವಾಗಿ ಜಮೀನನ್ನು ಸ್ವಾಧೀನ ಪಡಿಸಿಕೊಂಡಿವೆ. ಈ ರೈತರಿಗೆ ನ್ಯಾಯಯುತವಾದ ಭೂ ಬೆಲೆಯನ್ನು ನೀಡಬೇಕು ಎಂದು 950 ದಿನಗಳಿಂದ ಪ್ರತಿಭಟನಾ ಧರಣಿಯನ್ನು ನಡೆಸುತ್ತಿದ್ದು, ಸರ್ಕಾರ ತಕ್ಷಣವೇ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.

ಭೂ ಸಂತ್ರಸ್ತರು ಹೋರಾಟ ನಡೆಸುತ್ತಿರುವುದು ಅಧಿಕಾರಿ, ಜನಪ್ರತಿನಿಧಿ ಅಥವಾ ಸರ್ಕಾರದ ವಿರುದ್ಧವಲ್ಲ. ಭೂ ಸಂತ್ರಸ್ತರು ಹೋರಾಟ ನಡೆಸುತ್ತಿರುವುದು ಕಾಪೆರ್Çರೇಟರ್ ಕಂಪನಿಗಳ ವಿರುದ್ಧವಾಗಿದೆ. ಸರ್ಕಾರ ನಮ್ಮ ಕೂಗನ್ನು ಕೇಳಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರಿಸಿದಲ್ಲಿ ಮುಂದಿನ ದಿನಗಳಲ್ಲಿ ತೀವ್ರವಾದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಅವರು ಹೇಳಿದರು.

ಸತ್ಯಬಾಬು, ಸಿದ್ದಲಿಂಗಪ್ಪ, ರಮೇಶ್ ಸೇರಿ ಏಳು ಗ್ರಾಮಗಳ ಭೂ ಸಂತ್ರಸ್ತ ರೈತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande