ಕುಡತಿನಿ , 24 ಜುಲೈ (ಹಿ.ಸ.) :
ಆ್ಯಂಕರ್ : 33/11 ಕೆ.ವಿ ವಿಠಲಾಪುರ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಕೆ ಒಳಪಡುವ 11 ಕೆ.ವಿ ಎಲ್‍ಟಿ ವಿದ್ಯುತ್ ಮಾರ್ಗಗಳ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜುಲೈ 26 ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ವಿಠಲಾಪುರ, ಅಂತಾಪುರ, ಮೆಟ್ರಿಕಿ, ರಾಜಪುರ, ಸುಲ್ತಾನ್‍ಪುರ, ಗ್ರಾಮಗಳಲ್ಲಿ ಎನ್‍ಜೆವೈ ಮತ್ತು ಐಪಿಸೆಟ್ ಗ್ರಾಹಕರು ಮತ್ತು 33/11 ಕೆವಿ ವಿಠಲಾಪುರ ಮಾರ್ಗಕ್ಕೆ ಬರುವ ಎಲ್ಲಾ ಹೆಚ್‍ಟಿ ಮತ್ತು ಇಹೆಚ್‍ಟಿ ಗ್ರಾಹಕರಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್