ನವದೆಹಲಿ, 24 ಜುಲೈ (ಹಿ.ಸ.) :
ಆ್ಯಂಕರ್ : ಗಾಜಾದಲ್ಲಿ ಹೆಚ್ಚುತ್ತಿರುವ ನರಹತ್ಯೆ ಮತ್ತು ಮಾನವೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೇನಿ ಭಾರತ ಸರ್ಕಾರ ಮತ್ತು ವಿಶ್ವ ಸಮುದಾಯದಿಂದ ತಕ್ಷಣದ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ.
ಗಾಜಾದಲ್ಲಿ 20.1 ಲಕ್ಷ ಪ್ಯಾಲೆಸ್ಟೀನಿಯನ್ನರು, ಅದರಲ್ಲಿ 1.1 ಮಿಲಿಯನ್ ಮಕ್ಕಳು, ನಿರಂತರ ಮುತ್ತಿಗೆ ಮತ್ತು ಬಾಂಬ್ ದಾಳಿಗಳಿಂದ ಸಂಕಷ್ಟದಲ್ಲಿದ್ದಾರೆ. 90% ವೈದ್ಯಕೀಯ ಸೌಲಭ್ಯಗಳು ನಾಶವಾಗಿದ್ದು, ಆಹಾರ, ಔಷಧಿ ಕೊರತೆಯಿಂದ ಮಹಾಮಾರಿಗೆ ಭೀತಿ ಮೂಡಿದೆ. 6.6 ಲಕ್ಷ ಮಕ್ಕಳು ಶಾಲೆಗೆ ಹೋಗುತ್ತಿಲ್ಲ, 17 ಸಾವಿರಕ್ಕೂ ಹೆಚ್ಚು ಮಕ್ಕಳು ಅನಾಥರಾಗಿದ್ದಾರೆ.
ಭಾರತವು ತನ್ನ ಐತಿಹಾಸಿಕ ನೈತಿಕ ಬದ್ಧತೆಯಂತೆ ಇಸ್ರೇಲ್ ಕ್ರಮಗಳನ್ನು ಖಂಡಿಸಬೇಕು ಹಾಗೂ ಸೈನಿಕ ಸಹಕಾರವನ್ನು ಸ್ಥಗಿತಗೊಳಿಸಬೇಕು ಎಂದು ಅವರು ಒತ್ತಾಯಿಸಿದರು. ಇದೇ ಪರಿಸ್ಥಿತಿ ಮುಂದುವರಿದರೆ ಗಾಜಾದಲ್ಲಿ ಸೆಪ್ಟೆಂಬರ್ 2025ರ ವೇಳೆಗೆ ಭೀಕರ ಕ್ಷಾಮ ಎದುರಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa