ಬಳ್ಳಾರಿ, 24 ಜುಲೈ (ಹಿ.ಸ.) :
ಆ್ಯಂಕರ್ : ದೇಶದಾದ್ಯಂತ ಇರುವ ಗ್ರಾಮೀಣ ಬ್ಯಾಂಕುಗಳ ಐಪಿಓ ತೆರೆಯುವ ಪ್ರಸ್ತಾವನೆಯನ್ನು ವಿರೋಧಿಸಿ ಕರ್ನಾಟಕ ಗ್ರಾಮೀಣ ಬ್ಯಾಂಕ್‍ನ ಕಾರ್ಮಿಕ ಸಂಘಗಳು ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಧಾನ ಕಚೇರಿ ಎದುರು ಗುರುವಾರ ಧರಣಿ ನಡೆಸಿ, ಬ್ಯಾಂಕ್‍ನ ಆಡಳಿತ ಮಂಡಲಿಗೆ ಮನವಿ ಸಲ್ಲಿಸಿದ್ದಾರೆ.
ಕರ್ನಾಟಕ ಗ್ರಾಮೀಣ ಬ್ಯಾಂಕ್‍ನಲ್ಲಿರುವ ನೌಕರರ ಮತ್ತು ಅಧಿಕಾರಿಗಳ ಸಂಘಗಳ ಪಧಾಧಿಕಾರಿಗಳು, ಕೇಂದ್ರ ಸಮಿತಿ ಸದಸ್ಯರುಗಳು, ಎಐಆರ್‍ಆರ್‍ಬಿಇಎ ರಾಷ್ಟ್ರೀಯ ನಾಯಕರುಗಳಾದ ನಾಗಭೂಷಣರಾವ್, ಕೀರ್ತಿರಾಜ್ ಹಿಡಕಲ್, ಪರಶುರಾಮ್ ತೇರದಾಳ್, ರಾಜೇಂದ್ರ ಮದಕುಂಟಿ, ಶ್ರೀನಿವಾಸಮೂರ್ತಿ, ಎಐಜಿಬಿಇಓ ರಾಷ್ಟ್ರೀಯ ನಾಯಕರಾದ ಜಿ.ಜಿ. ಗಾಂಧಿ ಮತ್ತಿರರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಗ್ರಾಮೀಣ ಬ್ಯಾಂಕ್‍ಗಳ ಐಪಿಓ ತೆರೆದಲ್ಲಿ ಸರ್ಕಾರೇತರ ಸಂಸ್ಥೆಗಳಿಂದ, ಖಾಸಗಿ ವ್ಯಕ್ತಿಗಳಿಂದ ಬಂಡವಾಳ ಹೂಡಿಕೆಗೆ ಅವಕಾಶ ಸಿಗಲಿದೆ. ಆದರೆ, ಸರ್ಕಾರ ಬ್ಯಾಂಕ್‍ನ ಆಡಳಿತದ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತದೆ. ಖಾಸಗಿ ವ್ಯಕ್ತಿಗಳು ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರಾಗಿ ಆರ್ಥಿಕ ಭದ್ರತೆ ಮತ್ತು ಆಡಳಿತಾತ್ಮಕ ವಿಷಯಗಳಲ್ಲಿ ತೊಂದರೆಗಳಾಗುವ ಸಾಧ್ಯತೆಗಳಿರುತ್ತವೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್