ಬೆಂಗಳೂರು, 24 ಜುಲೈ (ಹಿ.ಸ.) :
ಆ್ಯಂಕರ್ : ದಂತವೈದ್ಯರು ಅನುಮತಿಯಿಲ್ಲದೇ ಚರ್ಮ ಸೌಂದರ್ಯ ಹಾಗೂ ಕೂದಲು ನಾಟಿ ಚಿಕಿತ್ಸೆಗಳನ್ನು ನಡೆಸುತ್ತಿರುವುದರಿಂದ ಸಾರ್ವಜನಿಕ ಆರೋಗ್ಯಕ್ಕೆ ಅಪಾಯ ಉಂಟಾಗಿದೆ ಎಂದು ಭಾರತೀಯ ಚರ್ಮರೋಗ ತಜ್ಞರ ಸಂಘಟನೆ (ಐಎಡಿವಿಎಲ್-ಕೆಎನ್) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ ಅವರಿಗೆ ಮನವಿ ಸಲ್ಲಿಸಿದ ಐಎಡಿವಿಎಲ್-ಕೆಎನ್ ವೈದ್ಯಕೀಯ ಅರ್ಹತೆ ಇಲ್ಲದ ದಂತವೈದ್ಯರು “ಡೆಂಟಲ್ ಸ್ಕಿನ್ & ಹೆರ್ ಕ್ಲಿನಿಕ್”ಗಳ ಮೂಲಕ ಪಿಆರ್ಪಿ, ಕೂದಲು ನಾಟಿ, ಲೇಸರ್ ಚಿಕಿತ್ಸೆ ಸೇರಿದಂತೆ ಹಲವು ಚರ್ಮ ಸಂಬಂಧಿತ ಪ್ರಕ್ರಿಯೆಗಳನ್ನು ನಡಿಸುತ್ತಿರುವುದಾಗಿ ಆರೋಪಿಸಿದೆ.
ಎನ್ಎಂಸಿ 2022ರ ಮಾರ್ಗಸೂಚಿ ಪ್ರಕಾರ, ಇಂತಹ ಚಿಕಿತ್ಸೆಗಳು ಕೇವಲ ಡರ್ಮಟಾಲಜಿಯ ಎಂಡಿ/ಡಿಎನ್ ಬಿ
ಅಥವಾ ಪ್ಲಾಸ್ಟಿಕ್ ಸರ್ಜರಿಯ ಎಂಸಿಎಚ್ ಹೊಂದಿರುವ ನೋಂದಾಯಿತ ವೈದ್ಯರಿಂದ ಮಾತ್ರ ನಿರ್ವಹಣೆಯಾಗಬೇಕು ಎಂದು ಐಎಡಿವಿಎಲ್ ಸ್ಪಷ್ಟಪಡಿಸಿದೆ.
ರಾಜ್ಯದಲ್ಲಿ 1,000ಕ್ಕೂ ಹೆಚ್ಚು ನಕಲಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆಂದು ತಿಳಿಸಿದ್ದು, ಸಾರ್ವಜನಿಕ ಜಾಗೃತಿ ಹಾಗೂ ಕಾನೂನು ಕ್ರಮ ಕೈಗೊಳ್ಳಲು ಸಚಿವರಿಗೆ ಮನವಿ ಮಾಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa