ಗೋವಾದಲ್ಲಿ ವಿಜಯಪುರ ಕಾರ್ಮಿಕರ ಮೇಲೆ ಗೂಂಡಾಗಿರಿ?
ವಿಜಯಪುರ, 24 ಜುಲೈ (ಹಿ.ಸ.) : ಆ್ಯಂಕರ್ : ಗೋವಾ ರಾಜ್ಯದಲ್ಲಿ ಕನ್ನಡಿಗ ಕಾರ್ಮಿಕರ ಮೇಲೆ ಗೂಂಡಾಗಿರಿ, ದಬ್ಬಾಳಿಕೆ ಜೋರಾಗಿದ್ದು, ಕರ್ನಾಟಕದವರು, ಕನ್ನಡಿಗರನ್ನ ಗುರಿ ಮಾಡಿ ಹಲ್ಲೆ ಆರೋಪ ಕೇಳಿ ಬಂದಿದೆ. ವಿಜಯಪುರ ಜಿಲ್ಲೆ ಕಲಕೇರಿ ಗ್ರಾಮದ ನಿವಾಸಿ ಅನಿಲ್ ರಾಠೋಡ ಮೇಲೆ ಕೆಲ ಗೂಡಾಗಳು ಸೇರಿಕೊಂಡು ಹಲ್ಲೆ
ಹಲ್ಲೆ


ವಿಜಯಪುರ, 24 ಜುಲೈ (ಹಿ.ಸ.) :

ಆ್ಯಂಕರ್ : ಗೋವಾ ರಾಜ್ಯದಲ್ಲಿ ಕನ್ನಡಿಗ ಕಾರ್ಮಿಕರ ಮೇಲೆ ಗೂಂಡಾಗಿರಿ, ದಬ್ಬಾಳಿಕೆ ಜೋರಾಗಿದ್ದು, ಕರ್ನಾಟಕದವರು, ಕನ್ನಡಿಗರನ್ನ ಗುರಿ ಮಾಡಿ ಹಲ್ಲೆ ಆರೋಪ ಕೇಳಿ ಬಂದಿದೆ.

ವಿಜಯಪುರ ಜಿಲ್ಲೆ ಕಲಕೇರಿ ಗ್ರಾಮದ ನಿವಾಸಿ ಅನಿಲ್ ರಾಠೋಡ ಮೇಲೆ ಕೆಲ ಗೂಡಾಗಳು ಸೇರಿಕೊಂಡು ಹಲ್ಲೆ ಮಾಡಿದ್ದಾರೆ. ಗೋವಾದಲ್ಲಿ ಸುರಕ್ಷಿತ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಕ್ಷಣೆಗೆ ಕನ್ನಡಿಗರು ಮನವಿ ಮಾಡಿದ್ದಾರೆ.

ಗೋವಾ ರಾಜ್ಯದ ಪ್ರೆಡ್ನೆ ಹತ್ತಿರದ ರಸ್ತೆಯಲ್ಲಿ ಟ್ರಕ್ ಅಡ್ಡಗಟ್ಟಿ ಗೂಂಡಾಗಿರಿ ಮಾಡಿದ್ದಾರೆ‌. ಕಾರ್, ಜೀಪ್ ನಲ್ಲಿ ಬಂದು ಅಡ್ಡಗಟ್ಟಿ ದಬ್ಬಾಳಿಕೆ ಮಾಡಿ ಕನ್ನಡಿಗ ಡ್ರೈವರ್ ಅನಿಲ್ ಗೆ ಥಳಿತ, ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ.

ಹಲ್ಲೆ ವಿಡಿಯೋ ಮೊಬೈಲ್ ನಲ್ಲಿ ಚಿತ್ರೀಕರಿಸಿದ ಚಾಲಕ ಅನಿಲ್, ಮಹಾರಾಷ್ಟ್ರದಿಂದ ಗೋವಾಗೆ ಕಟ್ಟಡಕ್ಕೆ ‌ಕಲ್ಲು ತೆಗೆದುಕೊಂಡು ಹೋಗುತ್ತಿದ್ದಾಗ ಹಲ್ಲೆ ಮಾಡಿದ್ದಾರೆ. ಗೋವಾದಲ್ಲಿ ಕನ್ನಡಿಗರ ಮೇಲಿನ ಗೂಂಡಾಗಿರಿ ಮಟ್ಟ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಸ್ಥಿಕೆ ವಹಿಸಿ ಹಲ್ಲೆಯಾಗದಂತೆ ಗೋವಾ ಮುಖ್ಯಮಂತ್ರಿ ಗೆ ಮಾತಾಡಲು ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande