ಅನಿಲ್ ಅಂಬಾನಿಗೆ ಸಂಬಂಧಿಸಿದ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ದಾಳಿ
ನವದೆಹಲಿ, 24 ಜುಲೈ (ಹಿ.ಸ.) : ಆ್ಯಂಕರ್ : ಜಾರಿ ನಿರ್ದೇಶನಾಲಯ ಉದ್ಯಮಿ ಅನಿಲ್ ಅಂಬಾನಿ ಅವರ ಕಂಪನಿಗಳಿಗೆ ಸಂಬಂಧಿಸಿದಂತೆ ಮುಂಬೈನಲ್ಲಿ 50ಕ್ಕೂ ಹೆಚ್ಚು ಸ್ಥಳಗಳ ಮೇಲೆ ಶೋಧ ಕಾರ್ಯಾಚರಣೆ ನಡೆಸಿದೆ. ಯೆಸ್ ಬ್ಯಾಂಕ್‌ನಿಂದ ಪಡೆದ ₹3,000 ಕೋಟಿಯ ಸಾಲ ವಂಚನೆಯ ಆರೋಪಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಯುತ್ತ
Ed raid


ನವದೆಹಲಿ, 24 ಜುಲೈ (ಹಿ.ಸ.) :

ಆ್ಯಂಕರ್ : ಜಾರಿ ನಿರ್ದೇಶನಾಲಯ ಉದ್ಯಮಿ ಅನಿಲ್ ಅಂಬಾನಿ ಅವರ ಕಂಪನಿಗಳಿಗೆ ಸಂಬಂಧಿಸಿದಂತೆ ಮುಂಬೈನಲ್ಲಿ 50ಕ್ಕೂ ಹೆಚ್ಚು ಸ್ಥಳಗಳ ಮೇಲೆ ಶೋಧ ಕಾರ್ಯಾಚರಣೆ ನಡೆಸಿದೆ.

ಯೆಸ್ ಬ್ಯಾಂಕ್‌ನಿಂದ ಪಡೆದ ₹3,000 ಕೋಟಿಯ ಸಾಲ ವಂಚನೆಯ ಆರೋಪಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಯುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇಡಿ ನಡೆಸಿದ ದಾಳಿಗಳು ಮುಖ್ಯವಾಗಿ ಅನಿಲ್ ಅಂಬಾನಿ ಅವರ ರಿಲಯನ್ಸ್ ಗ್ರೂಪ್ ಸಂಸ್ಥೆಗಳ (ಆರ್‌ಎಜಿ ಕಂಪನಿಗಳು) ಮೇಲೆ ಕೇಂದ್ರಿತವಾಗಿದ್ದು, 35ಕ್ಕೂ ಹೆಚ್ಚು ಬೇರೆ ಬೇರೆ ಸ್ಥಳಗಳ ಮೇಲೆ ಶೋಧ ನಡೆದಿದೆ.

ಇವುಗಳಲ್ಲಿ ದೆಹಲಿ ಮತ್ತು ಮುಂಬೈನ ಕೆಲ ಪ್ರಮುಖ ಕಚೇರಿಗಳು ಸೇರಿವೆ. ಆದರೆ ಅವರ ವೈಯಕ್ತಿಕ ನಿವಾಸದಲ್ಲಿ ಶೋಧ ನಡೆಸಲಾಗಿಲ್ಲ ಎನ್ನಲಾಗಿದೆ.

ಈ ತನಿಖೆ ಹಣ ವರ್ಗಾವಣೆ ತಡೆ ಕಾಯ್ದೆ, 2002 ಅಡಿಯಲ್ಲಿ ನಡೆಯುತ್ತಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವರದಿಯಲ್ಲಿ ರಿಲಯನ್ಸ್ ಕಮ್ಯುನಿಕೇಶನ್ಸ್ ಮತ್ತು ಅನಿಲ್ ಅಂಬಾನಿ ಅವರನ್ನು ವಂಚಕರಾಗಿದ್ದುದಾಗಿ ಹೇಳಿದ ಕೆಲವೇ ದಿನಗಳಲ್ಲಿ ಇಡಿ ಈ ದಾಳಿಯನ್ನು ಕೈಗೊಂಡಿದೆ.

ಈ ಸಂಬಂಧ ಕೇಂದ್ರ ತನಿಖಾ ಸಂಸ್ಥೆಗಳಿಗೆ ಸಿಬಿಐ ಸಲ್ಲಿಸಿದ ಎರಡು ಎಫ್‌ಐಆರ್‌ಗಳು, ಸೆಬಿ, ನ್ಯಾಷನಲ್ ಹೌಸಿಂಗ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ನ್ಯಾಷನಲ್ ಫೈನಾನ್ಷಿಯಲ್ ರಿಪೋರ್ಟಿಂಗ್ ಅಥಾರಿಟಿ ಮುಂತಾದ ಸಂಸ್ಥೆಗಳ ಮಾಹಿತಿಯಿಂದ ಇಡಿ ತನಿಖೆ ಆರಂಭವಾಗಿದೆ.

2017 ರಿಂದ 2019 ರ ನಡುವಿನ ಅವಧಿಯಲ್ಲಿ ಯೆಸ್ ಬ್ಯಾಂಕ್ ನೀಡಿದ ಅನುಮಾನಾಸ್ಪದ ಸಾಲಗಳ ಮೇಲೆ ಇಡಿ ದಿಟ್ಟ ನೋಟ ಹಾಯಿಸಿದೆ. ಹಣದ ಅನುಚಿತ ವರ್ಗಾವಣೆ ಆರೋಪಗಳ ಹಿನ್ನೆಲೆಯಲ್ಲಿ ಅನಿಲ್ ಅಂಬಾನಿ ಗುಂಪು ಈಗ ತನಿಖಾ ಸಂಸ್ಥೆಗಳ ಕಣ್ಗಾವಲಿನಲ್ಲಿ ಸಿಲುಕಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande