ಬಾಂಗ್ಲಾ ವಿಮಾನ ಅಪಘಾತ : ಢಾಕಾ ತಲುಪಿದ ಭಾರತೀಯ ತಜ್ಞ ವೈದ್ಯರ ತಂಡ
ಢಾಕಾ, 24 ಜುಲೈ (ಹಿ.ಸ.) : ಆ್ಯಂಕರ್ : ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿ ಜುಲೈ 21ರಂದು ನಡೆದ ಭೀಕರ ಮಿಲಿಟರಿ ವಿಮಾನ ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಭಾರತೀಯ ತಜ್ಞ ವೈದ್ಯರು ಹಾಗೂ ನರ್ಸಿಂಗ್ ಸಿಬ್ಬಂದಿಗಳ ತಂಡ ಢಾಕಾ ತಲುಪಿದೆ. ಭಾರತದ ರಾಂ. ಮ. ಲೋಹಿಯಾ ಹಾಗೂ ಸಫ್ದರ್ಜಂಗ್ ಆಸ್ಪತ್ರೆಗಳ
ಬಾಂಗ್ಲಾ ವಿಮಾನ ಅಪಘಾತ : ಢಾಕಾ ತಲುಪಿದ ಭಾರತೀಯ ತಜ್ಞ ವೈದ್ಯರ ತಂಡ


ಢಾಕಾ, 24 ಜುಲೈ (ಹಿ.ಸ.) :

ಆ್ಯಂಕರ್ : ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿ ಜುಲೈ 21ರಂದು ನಡೆದ ಭೀಕರ ಮಿಲಿಟರಿ ವಿಮಾನ ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಭಾರತೀಯ ತಜ್ಞ ವೈದ್ಯರು ಹಾಗೂ ನರ್ಸಿಂಗ್ ಸಿಬ್ಬಂದಿಗಳ ತಂಡ ಢಾಕಾ ತಲುಪಿದೆ.

ಭಾರತದ ರಾಂ. ಮ. ಲೋಹಿಯಾ ಹಾಗೂ ಸಫ್ದರ್ಜಂಗ್ ಆಸ್ಪತ್ರೆಗಳಿಂದ ಇಬ್ಬರು ತಜ್ಞರು ಮತ್ತು ಸಹಾಯಕರು ಆಗಮಿಸಿದ್ದು, ನಾಳೆ ಬೆಳಿಗ್ಗೆಯಿಂದ ಚಿಕಿತ್ಸೆ ಕಾರ್ಯ ಆರಂಭಿಸಲಿದ್ದಾರೆ. ಈ ಕುರಿತು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಅಪಘಾತದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶಕ್ಕೆ ಸಹಾಯ ಭರವಸೆ ನೀಡಿದ್ದರು. ಭಾರತೀಯ ಹೈಕಮಿಷನ್ ಅಧಿಕಾರಿಗಳು ವೈದ್ಯರ ತಂಡವನ್ನು ಸ್ವಾಗತಿಸಿದ್ದು, “ಈ ಸಂಕಟದ ವೇಳೆಯಲ್ಲಿ ಭಾರತ ಬಾಂಗ್ಲಾದೇಶದೊಂದಿಗೆ ನಿಂತಿದೆ” ಎಂದಿದ್ದಾರೆ.

ಘಟನೆ ವೇಳೆ ಢಾಕಾದ ಮೈಲ್‌ಸ್ಟೋನ್ ಶಾಲೆಗೆ ವಿಮಾನ ಡಿಕ್ಕಿ ಹೊಡೆದ ಪರಿಣಾಮ 25 ಮಕ್ಕಳ ಸಹಿತ 31 ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande