ಜೈವಿಕ ಪೋಷಕರಿಂದ ಬೇರ್ಪಟ್ಟ ಎರಡು ಮಕ್ಕಳ ದತ್ತು
ಕೊಪ್ಪಳ, 24 ಜುಲೈ (ಹಿ.ಸ.) : ಆ್ಯಂಕರ್ : ಕೊಪ್ಪಳದ ಅಮೂಲ್ಯ (ಪಿ) ದತ್ತು ಸಂಸ್ಥೆಯಲ್ಲಿ ನಾನಾ ಕಾರಣಗಳಿಂದ ಜೈವಿಕ ಪೋಷಕರಿಂದ ಬೇರ್ಪಟ್ಟ ಎರಡು ಮಕ್ಕಳನ್ನು ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಬಿ.ಇಟ್ನಾಳ್ ಅವರ ಸಮ್ಮುಖದಲ್ಲಿ ಗುರುವಾರ ದತ್ತು ನೀಡಲಾಯಿತು. ಮಕ್ಕಳ ನ್ಯಾಯ (ಪೋಷಣೆ ಮತ್ತು ರಕ್ಷಣೆ)ಕಾಯ್ದೆ
ಜೈವಿಕ ಪೋಷಕರಿಂದ ಬೇರ್ಪಟ್ಟ ಎರಡು ಮಕ್ಕಳ ದತ್ತು


ಕೊಪ್ಪಳ, 24 ಜುಲೈ (ಹಿ.ಸ.) :

ಆ್ಯಂಕರ್ : ಕೊಪ್ಪಳದ ಅಮೂಲ್ಯ (ಪಿ) ದತ್ತು ಸಂಸ್ಥೆಯಲ್ಲಿ ನಾನಾ ಕಾರಣಗಳಿಂದ ಜೈವಿಕ ಪೋಷಕರಿಂದ ಬೇರ್ಪಟ್ಟ ಎರಡು ಮಕ್ಕಳನ್ನು ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಬಿ.ಇಟ್ನಾಳ್ ಅವರ ಸಮ್ಮುಖದಲ್ಲಿ ಗುರುವಾರ ದತ್ತು ನೀಡಲಾಯಿತು.

ಮಕ್ಕಳ ನ್ಯಾಯ (ಪೋಷಣೆ ಮತ್ತು ರಕ್ಷಣೆ)ಕಾಯ್ದೆ 2015ರ ತಿದ್ದುಪಡಿ 2021 ರನ್ವಯ ನೋಂದಣಿಗೊಂಡು ಕಾರ್ಯನಿರ್ವಹಿಸುತ್ತಿರುವ ಅಮೂಲ್ಯ (ಪಿ) ದತ್ತು ಸಂಸ್ಥೆಯಲ್ಲಿನ ಯಾವುದೋ ಕಾರಣಗಳಿಂದ ಜೈವಿಕ ಪೋಷಕರಿಂದ ಬೇರ್ಪಟ್ಟ 2 ಮಕ್ಕಳನ್ನು ದತ್ತು ಅಧಿನಿಯಮ 2022ರ ಅನ್ವಯ ಜುಲೈ 24 ರಂದು ಒಂದು ಮಗುವನ್ನು ತಮಿಳನಾಡು ರಾಜ್ಯದ ಪೋಷಕರಿಗೆ ಹಾಗೂ ಇನ್ನೊಂದು ಮಗುವನ್ನು ವಿದೇಶಿ (ಮಾಲ್ಟಾ) ಪೋಷಕರಿಗೆ ದತ್ತು ನೀಡಲಾಗಿರುತ್ತದೆ.

ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು, ಪೋಷಕರು ಮತ್ತು ದತ್ತು ಸಂಸ್ಥೆಯ ಅಧ್ಯಕ್ಷರು ಹಾಗೂ ಸಿಬ್ಬಂದಿಗಳು ಹಾಜರಿದ್ದರು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande