ನವೀಕರಿಸಬಹುದಾದ ಇಂಧನದಲ್ಲಿ ಭಾರತ ಅದ್ಭುತ ಸಾಧನೆ : ಪ್ರಧಾನಿ ಮೋದಿ ಶ್ಲಾಘನೆ
ನವದೆಹಲಿ, 16 ಜುಲೈ (ಹಿ.ಸ.) : ಆ್ಯಂಕರ್ : ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತ ಅದ್ಭುತ ಸಾಧನೆಗೈಯುತ್ತಿದೆ. ಪಳೆಯುಳಿಕೆಯೇತರ ಇಂಧನ ಉತ್ಪಾದನೆಯಲ್ಲಿ 5 ವರ್ಷ ಮೊದಲೇ ಗುರಿ ಸಾಧಿಸಿರುವುದು ಹೆಮ್ಮೆಯ ಸಂಗತಿ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ನವೀಕರಿಸಬಹುದಾದ ಇಂಧನ ವಲಯದಲ್ಲ
Pm


Joshi


ನವದೆಹಲಿ, 16 ಜುಲೈ (ಹಿ.ಸ.) :

ಆ್ಯಂಕರ್ : ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತ ಅದ್ಭುತ ಸಾಧನೆಗೈಯುತ್ತಿದೆ. ಪಳೆಯುಳಿಕೆಯೇತರ ಇಂಧನ ಉತ್ಪಾದನೆಯಲ್ಲಿ 5 ವರ್ಷ ಮೊದಲೇ ಗುರಿ ಸಾಧಿಸಿರುವುದು ಹೆಮ್ಮೆಯ ಸಂಗತಿ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.

ನವೀಕರಿಸಬಹುದಾದ ಇಂಧನ ವಲಯದಲ್ಲಿ 2030ರ ವೇಳೆಗೆಭಾರತ ಒಟ್ಟಾರೆ 484.8 GW ಸ್ಥಾಪಿತ ವಿದ್ಯುತ್‌ ಸಾಮರ್ಥ್ಯದ ಗುರಿಯೊಂದಿಗೆ ಹೆಜ್ಜೆ ಹಾಕಿತ್ತು. ಆದರೆ, ಪಳೆಯುಳಿಕೆಯೇತರ ಇಂಧನದಲ್ಲಿ ಅದಾಗಲೇ 242.8 GW ಸಾಮರ್ಥ್ಯ ಪೂರೈಸಿದೆ. ಪ್ಯಾರಿಸ್‌ ಒಪ್ಪಂದಕ್ಕೆ ಅನುಗುಣವಾಗಿ 5 ವರ್ಷ ಮೊದಲೇ ಗುರಿ ಸಾಧಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿರುವ ದೇಶದ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ ಭಾರತದ ಈ ಪ್ರಗತಿ ಮಹತ್ವ ಪಡೆದಿದೆ. ಎನ್ ಡಿಸಿ ಬದ್ಧತೆಗಳನ್ನು ಪೂರೈಸುವ ಹಾದಿಯಲ್ಲಿರುವ ಕೆಲವೇ ಜಿ20 ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದ್ದು, ಶುದ್ಧ ಇಂಧನ ಪರಿವರ್ತನೆಯಲ್ಲಿ ಭಾರತ ತನ್ನ ನಾಯಕತ್ವವನ್ನು ಬಲಪಡಿಸುತ್ತದೆ ಎಂದಿರುವ ಪ್ರಧಾನಿ, ಹಸಿರು ಮತ್ತು ಸುಸ್ಥಿರ ಭವಿಷ್ಯ ನಿರ್ಮಿಸುವ ನಿಟ್ಟಿನಲ್ಲಿ ಭಾರತದ ಬದ್ಧತೆ ಮತ್ತು ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

2030ಕ್ಕೂ ಮೊದಲೇ ಶೇ.50ರಷ್ಟು ಪಳೆಯುಳಿಕೆಯೇತರ ಇಂಧನ ಸ್ಥಾಪಿತ ಸಾಮರ್ಥ್ಯ ಸಾಧಿಸಿರುವುದು ಮಹತ್ವಾಕಾಂಕ್ಷೆ, ನಾವೀನ್ಯತೆ ಮತ್ತು ಸುಸ್ಥಿರ ಅಭಿವೃದ್ಧಿಯ ಬದ್ಧತೆಗೆ ಸಾಕ್ಷಿಯಾಗಿದೆ. 2030ರ ವೇಳೆಗೆ 500 GW ಪಳೆಯುಳಿಕೆಯೇತರ ಸಾಮರ್ಥ್ಯ ಮತ್ತು 2070ರ ವೇಳೆಗೆ ನಿವ್ವಳ-ಶೂನ್ಯ ಹೊರಸೂಸುವಿಕೆಯ ಗುರಿಯತ್ತ ದೇಶ ಮುನ್ನುಗ್ಗುತ್ತಿದ್ದು, ಮುಂದಿನ ಪೀಳಿಗೆಗೆ ಶುಭವಾಗಲಿದೆ ಎಂದು ಆಶಿಸಿದ್ದಾರೆ ಪ್ರಧಾನಿ.

*ಸಚಿವ ಜೋಶಿ ಇಚ್ಛಾಶಕ್ತಿ ಶ್ಲಾಘಿಸಿ ಪ್ರಧಾನಿ ಟ್ವೀಟ್‌:*

ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದಲ್ಲಿ ಭಾರತ ಇಂದು ಹಸಿರು ಮತ್ತು ಸುಸ್ಥಿರ ಇಂಧನ ಭವಿಷ್ಯದತ್ತ ಸಾಗುತ್ತಿದೆ. ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಶೇ.50ರಷ್ಟನ್ನು ಸಾಧಿಸಿದ್ದು, ಅವರ ಇಚ್ಛಾಶಕ್ತಿ, ಕಾರ್ಯ ತತ್ಪರತೆಗೆ ಸಾಕ್ಷಿಯಾಗಿದೆ ಶ್ಲಾಘಿಸಿ ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

ಪಿಎಂ ಕುಸುಮ್‌, ಪಿಎಂ ಸೂರ್ಯಘರ್‌, ಸೋಲಾರ್‌ ಪಾರ್ಕ್‌ ಅಳವಡಿಕೆ-ಅಭಿವೃದ್ಧಿ, ಮತ್ತು ರಾಷ್ಟ್ರೀಯ ವಿಂಡ್‌-ಸೋಲಾರ್‌ ಹೈಬ್ರಿಡ್‌ ಪಾಲಿಸಿಯಂತಹ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಮೂಲಕ ನವೀಕರಿಸಬಹುದಾದ ಇಂಧನ ವಲಯಕ್ಕೆ ಬಲಿಷ್ಠ ಬುನಾದಿ ಹಾಕಿದ್ದಾರೆ. ಪಿಎಂ ಸೂರ್ಯ ಘರ್ ಮೂಲಕ 1 ಕೋಟಿ ಮನೆಗಳಿಗೆ ಸೌರಶಕ್ತಿ ಬೆಳಕು ನೀಡಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande