ನಕ್ಸಲ್ ದಂಪತಿ ಪೋಲಿಸರಿಗೆ ಶರಣಾಗತಿ
ಜಗದಲ್ಪುರ್, 16 ಜುಲೈ (ಹಿ.ಸ.) : ಆ್ಯಂಕರ್ : ಛತ್ತೀಸ್‌ಗಢದ ಬಸ್ತಾರ್‌ನಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ, ಹಿರಿಯ ನಕ್ಸಲ್ ದಂಪತಿ ಲಚ್ಚಣ್ಣ ಅಲಿಯಾಸ್ ಗೋಪಣ್ಣ ಮತ್ತು ಪತ್ನಿ ಅಂಕುಬಾಯಿ ಅಲಿಯಾಸ್ ಅನಿತಕ್ಕ ಅವರು ತೆಲಂಗಾಣದ ರಾಮಗುಂಡಂನಲ್ಲಿ ಪೊಲೀಸ್ ಆಯುಕ್ತರ ಮುಂದೆ ಶರಣಾಗಿದ
Surrender


ಜಗದಲ್ಪುರ್, 16 ಜುಲೈ (ಹಿ.ಸ.) :

ಆ್ಯಂಕರ್ : ಛತ್ತೀಸ್‌ಗಢದ ಬಸ್ತಾರ್‌ನಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ, ಹಿರಿಯ ನಕ್ಸಲ್ ದಂಪತಿ ಲಚ್ಚಣ್ಣ ಅಲಿಯಾಸ್ ಗೋಪಣ್ಣ ಮತ್ತು ಪತ್ನಿ ಅಂಕುಬಾಯಿ ಅಲಿಯಾಸ್ ಅನಿತಕ್ಕ ಅವರು ತೆಲಂಗಾಣದ ರಾಮಗುಂಡಂನಲ್ಲಿ ಪೊಲೀಸ್ ಆಯುಕ್ತರ ಮುಂದೆ ಶರಣಾಗಿದ್ದಾರೆ.

ಲಚ್ಚಣ್ಣನ ತಲೆಗೆ ₹25 ಲಕ್ಷ ಮತ್ತು ಅನಿತಕ್ಕನ ತಲೆಗೆ ₹8 ಲಕ್ಷ ಬಹುಮಾನ ಇತ್ತು. ಅವರು ಕಳೆದ 22-23 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದು, ಬಸ್ತಾರ್ ಹಾಗೂ ತೆಲಂಗಾಣದ ಬೇರೆ ಬೇರೆ ಪ್ರದೇಶಗಳಲ್ಲಿ ಪ್ರಮುಖ ದಾಳಿಗಳ ಮಾಸ್ಟರ್‌ಮೈಂಡ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು.

ಈ ಶರಣಾಗತಿಯು ಬಸ್ತಾರ್ ಮತ್ತು ತೆಲಂಗಾಣ ಭಾಗದಲ್ಲಿ ನಕ್ಸಲ್ ಚಟುವಟಿಕೆಗಳ ಮೇಲೆ ಭಾರೀ ಪರಿಣಾಮ ಬೀರಲಿದೆ ಎಂದು ಭದ್ರತಾ ಅಧಿಕಾರಿಗಳು ಅಂದಾಜಿಸಿದ್ದಾರೆ. ಇವರು ದೀರ್ಘಕಾಲದಿಂದ ಭದ್ರತಾ ಪಡೆಗಳಿಗೆ ಬೇಕಾಗಿದ್ದ ಪ್ರಮುಖ ಕೇಡರ್ ನಕ್ಸಲರಾಗಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande