ಜಲಂಧರ್, 16 ಜುಲೈ (ಹಿ.ಸ.) :
ಆ್ಯಂಕರ್ : ವಿಶ್ವದ ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ಅವರ ಸಾವಿಗೆ ಕಾರಣವಾದ ಕಾರು ಅಪಘಾತ ಪ್ರಕರಣದಲ್ಲಿ, ಜಲಂಧರ್ ಪೊಲೀಸರು ಅನಿವಾಸಿ ಭಾರತೀಯ ಅಮೃತಪಾಲ್ ಸಿಂಗ್ ಧಿಲ್ಲೋನ್ ಅವರನ್ನು ಬಂಧಿಸಿದ್ದಾರೆ.
ಅವರು ಫೌಜಾ ಸಿಂಗ್ ವಾಯು ವಿಹಾರಕ್ಕೆ ತೆರಳಿದ್ದ ವೇಳೆ ಫಾರ್ಚೂನರ್ ಕಾರಿನಿಂದ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದರು. ಗಂಭೀರ ಗಾಯಗೊಂಡ ಫೌಜಾ ಸಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಅಪಘಾತದ ನಂತರ ಧಿಲ್ಲೋನ್ ನಗರದಿಂದ ತಪ್ಪಿಸಿಕೊಂಡು ತಮ್ಮ ಹುಟ್ಟೂರಾದ ಕರ್ತಾರ್‌ಪುರಕ್ಕೆ ತೆರಳಿದ್ದ.
ಪೊಲೀಸರು ತಡರಾತ್ರಿ ಅವರನ್ನು ಬಂಧಿಸಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಬಂಧನದ ವೇಳೆ ಅವರು ಅಪಘಾತಕ್ಕೆ ತಾವು ಕಾರಣನಾಗಿರುವುದನ್ನು ಒಪ್ಪಿಕೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa