ಗುವಾಹಟಿ, 16 ಜುಲೈ (ಹಿ.ಸ.) :
ಆ್ಯಂಕರ್ : ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕ ಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಅಸ್ಸಾಂನ ಗುವಾಹಟಿಗೆ ಆಗಮಿಸಿದರು. ಬೋರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ಅವರು ಇತರ ನಾಯಕರೊಂದಿಗೆ ಸ್ವಾಗತಿಸಿದರು.
ಮುಂಬರುವ ವಿಧಾನ ಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಭೇಟಿ ನಡೆಯುತ್ತಿದೆ. ಎಪಿಸಿಸಿ ಮತ್ತು ರಾಜ್ಯದ ಶಾಸಕರು, ಸಂಸದರು ಹಾಗೂ ಪಕ್ಷದ ಪದಾಧಿಕಾರಿಗಳ ಸಭೆಯ ನಂತರ, ಇಬ್ಬರೂ ನಾಯಕರು ಛಾಯಗಾಂವ್‌ನಲ್ಲಿ ನಡೆಯುವ ಕಾರ್ಯಕರ್ತರ ರ್ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.
ರ್ರ್ಯಾಲಿ ಗುವಾಹಟಿಯ ಹೊರವಲಯದಲ್ಲಿ ನಡೆಯುತ್ತಿದೆ. ಈ ಮಧ್ಯೆ ಗುವಾಹಟಿ ಪೊಲೀಸರ ನಿಷೇಧಾಜ್ಞೆ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಈ ಕ್ರಮವನ್ನು ರಾಜಕೀಯ ಒತ್ತಡದ ಭಾಗವೆಂದು ಹೇಳಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa