ನವದೆಹಲಿ, 16 ಜುಲೈ (ಹಿ.ಸ.) :
ಆ್ಯಂಕರ್ : ನವರತ್ನ ಸಿಪಿಎಸ್‌ಇ ಸಂಸ್ಥೆ ಎನ್‌ಎಲ್‌ಸಿಐಎಲ್ ತನ್ನ ಅಂಗಸಂಸ್ಥೆ ಎನ್‌ಐಆರ್‌ಎಲ್ ನಲ್ಲಿ ₹7,000 ಕೋಟಿ ಹೂಡಿಕೆ ಮಾಡಲು ಕೇಂದ್ರ ಸರ್ಕಾರ ವಿಶೇಷ ವಿನಾಯಿತಿ ನೀಡಿದೆ.
ಈ ಮೂಲಕ, ಪೂರ್ವಾನುಮತಿ ಅಗತ್ಯವಿಲ್ಲದೇ ನೇರ ಅಥವಾ ಜಂಟಿ ಉದ್ಯಮಗಳ ಮೂಲಕ ಹೂಡಿಕೆ ಮಾಡಲು ಅವಕಾಶ ಸಿಕ್ಕಿದೆ. ಸಿಪಿಎಸ್‌ಇಗಳಿಗೆ ಅನ್ವಯವಾಗುವ ಶೇಕಡಾ 30ರಷ್ಟು ನಿವ್ವಳ ಮೌಲ್ಯ ಮಿತಿಯನ್ನೂ ಸಡಿಲಿಸಲಾಗಿದೆ.
ಈ ನಿರ್ಧಾರವು 2030ರ ವೇಳೆಗೆ 10.11 ಗಿಗಾವಾಟ್ ಹಾಗೂ 2047ರ ವೇಳೆಗೆ 32 ಗಿಗಾವಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆ ಗುರಿಯನ್ನು ಹೊಂದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa