ಬೆಂಗಳೂರು, 16 ಜುಲೈ (ಹಿ.ಸ.) :
ಆ್ಯಂಕರ್ : ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ಸಲಹಾ ಸಮಿತಿಯ ಮೊದಲ ಸಭೆ ಬೆಂಗಳೂರಿನಲ್ಲಿ ನಡೆಯಿತು.
ಸಭೆಯ ಪ್ರಮುಖ ನಿರ್ಣಯಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ಘೋಷಣೆ ಎಂಬ ಶ್ರೇಷ್ಠ ದಾಖಲೆ ಜಾರಿಗೆ ಬರಲಿದ್ದು, ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಕಾಂಗ್ರೆಸ್ ಕೈಗೊಂಡಿರುವ ಗಟ್ಟಿ ದೃಢ ನಿಲುವನ್ನು ಸಾರಿದೆ.
ನ್ಯಾಯ ಯೋಧ ರಾಹುಲ್ ಗಾಂಧಿಗೆ ಅಭಿನಂದನೆ:
ಘೋಷಣೆಯಲ್ಲಿ, ಸಾಮಾಜಿಕ ನ್ಯಾಯಕ್ಕಾಗಿ ಧೈರ್ಯದಿಂದ ಹೋರಾಡಿದ ರಾಹುಲ್ ಗಾಂಧಿಯವರ ಧೀರ ನಾಯಕತ್ವವನ್ನು ಸಮಿತಿ ಮೆಚ್ಚಿದೆ. ಜಾತಿ ಆಧಾರಿತ ಜನಗಣತಿ ನಡೆಸಬೇಕು ಎಂಬ ಅಧಿಸೂಚನೆಯ ಹಿಂದಿರುವ ಬಲವಾದ ಕಂಠಸ್ವರವಾಗಿ ಅವರು ದೇಶಾದ್ಯಂತ ಮುಖಂಡರಾಗಿ ಹೊರಹೊಮ್ಮಿದ್ದಾರೆ. ಅವರ ದೃಢತೆ ಮತ್ತು ಹೋರಾಟದಿಂದ ಕೇಂದ್ರದ ಮನುವಾದಿ ಮೋದಿಯವರ ಸರ್ಕಾರ ಜಾತಿ ಜನಗಣತಿಗೆ ಒಪ್ಪಿಗೆ ನೀಡಬೇಕಾದ ಸ್ಥಿತಿಗೆ ತಲುಪಿದೆ ಎಂದು ಘೋಷಣೆಯಲ್ಲಿ ತಿಳಿಸಲಾಗಿದೆ.
ಸಮಿತಿಯ ಪ್ರಮುಖ ತೀರ್ಮಾನಗಳು:
1. ರಾಷ್ಟ್ರೀಯ ಮಟ್ಟದ ಜಾತಿ ಜನಗಣತಿ:
ಭಾರತ ಸರಕಾರದ ಜನಗಣತಿ ಆಯೋಗ ಮೂಲಕ ಸಮಗ್ರ ಜಾತಿ ಜನಗಣತಿ ನಡೆಸಬೇಕು.
ಈ ಜನಗಣತಿಯಲ್ಲಿ ಪ್ರತಿ ವ್ಯಕ್ತಿಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ ಮತ್ತು ರಾಜಕೀಯ ಮಾಹಿತಿ ಒಳಗೊಂಡಿರಬೇಕು.
ತೆಲಂಗಾಣ ರಾಜ್ಯದಲ್ಲಿ ಕೈಗೊಂಡ ಸೀಪ ಜಾತಿ ಸಮೀಕ್ಷೆಯನ್ನು ಮಾದರಿಯಾಗಿ ಬಳಸಬೇಕು.
ಶಿಕ್ಷಣ, ಉದ್ಯೋಗ, ಸರ್ಕಾರಿ ಸೇವೆ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳಿಗೆ ಸಮರ್ಪಕವಾಗಿ ಹಕ್ಕು ನಿರ್ಧರಿಸಲು 50% ಮೀಸಲಾತಿಯ ಮಿತಿಯನ್ನು ತೆಗೆದುಹಾಕಬೇಕು.
. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ:
ಭಾರತದ ಸಂವಿಧಾನದ ವಿಧಿ 15(5) ಅಡಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳವರಿಗೆ ಮೀಸಲಾತಿ ಖಚಿತಗೊಳಿಸಲು ಕ್ರಮವಹಿಸಬೇಕು.
ಸಮಾಜ ಪರಿವರ್ತನೆಯ :
ಘೋಷಣೆಯ ಅಂತಿಮ ಭಾಗದಲ್ಲಿ, ನ್ಯಾಯ ಯೋಧ ರಾಹುಲ್ ಗಾಂಧಿಯವರ ಧೈರ್ಯದ ನಾಯಕತ್ವದಡಿ ನಾವು ಭಾರತವನ್ನು ಸಮಾನತೆಯ ರಾಷ್ಟ್ರವನ್ನಾಗಿ ಪರಿವರ್ತಿಸಲು ಸಂಕಲ್ಪ ಬದ್ಧರಾಗಿದ್ದೇವೆ ಎಂಬ ಶಪಥವನ್ನು ಸಮಿತಿ ಸದಸ್ಯರು ಕೈಗೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa