ಹೊಸಪೇಟೆ, 15 ಜುಲೈ (ಹಿ.ಸ.) :
ಆ್ಯಂಕರ್ : ಕಂದಾಯ ಇಲಾಖೆ ಸೇರಿ ಭೂಮಿ ಸೇವೆ, ಮೋಜಿಣಿ ಸೇವೆ, ಆಧಾರ್ ಸೇವೆ ಮತ್ತು ಸಾಮಾಜಿಕ ಭದ್ರತಾ ಸೇವೆಗಳು ಶೀಘ್ರವಾಗಿ ಜನರಿಗೆ ತಲುಪುವ ನಿಟ್ಟಿನಲ್ಲಿ ಅಟಲ್‍ಜೀ ಜನಸ್ನೇಹಿ ಕೇಂದ್ರ ಹಾಗೂ ಜಿಲ್ಲಾ ಕೇಂದ್ರದಲ್ಲಿ ಸ್ಪಂದನ ಕೇಂದ್ರಗಳು ತ್ವರಿತ ಸೇವೆಗಳನ್ನು ನೀಡಲು ಸನ್ನದ್ಧವಾಗಿವೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಸ್ಪಂದನ ಕೇಂದ್ರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಂಗಳವಾರ ಮಾತನಾಡಿದರು, ಸರ್ಕಾರಿ ಸೇವೆಗಳಿಗೆ ಜನರು ಅನಗತ್ಯ ಅಲೆದಾಟ ತಪ್ಪಿಸಲು ಹಾಗೂ ಶೀಘ್ರ ಸೇವೆ ನೀಡಲು ಜಿಲ್ಲಾಡಳಿತ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಈಗಾಗಲೇ ತಾಲೂಕು ಮಟ್ಟದಲ್ಲಿ ಅಟಲ್‍ಜೀ ಜನಸ್ನೇಹಿ ಕೇಂದ್ರದ ಮೂಲಕ ಅನೇಕ ಸೇವೆಗಳನ್ನು ನೀಡಲಾಗುತ್ತಿದ್ದು, ಜಿಲ್ಲಾ ಕೇಂದ್ರದಲ್ಲಿ ಸ್ಪಂದನ ಕೇಂದ್ರದಿಂದಲೂ ತ್ವರಿತ ಸೇವೆ ನೀಡಲು ಮುಂದಾಗಿದೆ. ಸಾರ್ವಜನಿಕರು ಸಾಮಾಜಿಕ ಭದ್ರತಾ ಸೇವೆಗಳು, ಕಂದಾಯ ಇಲಾಖೆ, ಭೂಮಿ ಸೇವೆ, ಅಧಾರ್ ನಂತಹ ಕೆಲಸಗಳಿಗೆ ಸ್ಪಂದನ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಪಡೆಯಬಹುದಾಗಿದೆ. ಮಧ್ಯವರ್ತಿಗಳಿಂದ ಅವಲಂಬಿತರಾಗದೇ ನೇರವಾಗಿ ಕೇಂದ್ರಗಳಲ್ಲಿನ ಸೇವೆಗಳನ್ನು ಸದುಪಯೋಗಪಡಿಸಿಬೇಕು ಎಂದರು.
ಸ್ಪಂದನ ಕೇಂದ್ರದಲ್ಲಿ ಸಾರ್ವಜನಿಕರಿಗೆ ನೀಡುವ ಸೇವೆಗಳು : ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ಸಾಲ ತೀರಿಸುವ ಶಕ್ತಿ ದೃಢೀಕರಣ ಪತ್ರ, ವ್ಯವಸಾಯಗಾರರ ಕುಟುಂಬದ ಸದಸ್ಯ ದೃಢೀಕರಣ ಪತ್ರ, ಕೃಷಿ ಕಾರ್ಮಿಕ ದೃಢೀಕರಣ ಪತ್ರ, ವ್ಯವಸಾಯಗಾರರ ದೃಢೀಕರಣ ಪತ್ರ, ವಂಶವೃಕ್ಷ ದೃಢೀಕರಣ ಪತ್ರ, ಬೋನಪೈಡ್ ದೃಢೀಕರಣ ಪತ್ರ, ವಸತಿ ದೃಢೀಕರಣ ಪತ್ರ, ಭೂ ಹಿಡುವಳಿ ಪ್ರಮಾಣ ಪತ್ರ, ಜಮೀನು ಇಲ್ಲದಿರುವ ದೃಢೀಕರಣ ಪತ್ರ, ಜೀವಂತ ದೃಢೀಕರಣ ಪತ್ರ, ಸರ್ಕಾರಿ ನೌಕರಿಯಲ್ಲಿ ಇಲ್ಲದಿರುವ ದೃಢೀಕರಣ ಪತ್ರ, ಮರುವಿವಾಹವಾಗದಿರುವ ದೃಢೀಕರಣ ಪತ್ರ, ಮೇಲುಸ್ಥರಕ್ಕೆ ಸೇರಿಲ್ಲವೆಂಬ ದೃಢೀಕರಣ ಪತ್ರ, ಗೇಣಿ ರಹಿತ ದೃಢೀಕರಣ ಪತ್ರ, ಜನಸಂಖ್ಯೆ ದೃಢೀಕರಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ, ಸಣ್ಣ, ಅತಿ ಸಣ್ಣ ಹಿಡುವಳಿದಾರರ ದೃಢೀಕರಣ ಪತ್ರ, ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ, ನಿರುದ್ಯೋಗಿ ದೃಢೀಕರಣ ಪತ್ರ, ವಿಧವಾ ದೃಢೀಕರಣ ಪತ್ರ, ಬೆಳೆ ದೃಢೀಕರಣ ಪತ್ರ, ಹೈದ್ರಾಬಾದ್ ಕರ್ನಾಟಕ ಪ್ರದೇಶದ ವಸತಿ ಮತ್ತು ಅರ್ಹತಾ ದೃಢೀಕರಣ ಪತ್ರ, ಅಲ್ಪಸಂಖ್ಯಾತರ ದೃಢೀಕರಣ ಪತ್ರ, ಅಂಗವಿಕಲ ಪಿಂಚಣಿ, ವಿಧವಾ ಪಿಂಚಣಿ, ಸಂಧ್ಯಾ ಸುರುಕ್ಷಾ ಯೋಜನೆ, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ದಾಪ್ಯ ಪಿಂಚಣಿ, ಮೈತ್ರಿ, ಮನಸ್ಥಿನಿ, ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಪಿಂಚಣಿ, ಆತ್ಮಹತ್ಯೆಗೊಳಗಾದ ರೈತರ ವಿಧವೆಯರ ಪಿಂಚಣಿ, ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ಸ್ವತ್ತು ಪ್ರಮಾಣ ಪತ್ರ, ಜನರಲ್ ಸರ್ಟಿಫಿಕೆಟ್‍ಗಳಿಗೆ ಅರ್ಜಿ ಸಲ್ಲಿಸಲಾಗುವುದು. ಭೂಮಿ ಸೇವೆಗಳು : ಪಹಣಿ ಪತ್ರಿ/ಉತಾರ, ಮುಟೇಶನ್ (ಹಕ್ಕು ಬದಲಾವಣೆ ಪ್ರತಿ), ಖಾತಾ ಪ್ರತಿ. ಮೋಜಿಣಿ ಸೇವೆಗಳು : 11 ಇ ನಕ್ಷೆ ಅಲಿನೇಷನ್ ಪೂರ್ವ ನಕ್ಷೆ ಮತ್ತು ತತ್ಕಾಲ್ ಪೆÇೀಡಿ ಹದ್ದು ಬಸ್ತು, ಇ-ಸ್ವತ್ತು, ಸರ್ವೆ ದಾಖಲೆಗಳು. ಆಧಾರ್ ಸೇವೆಗಳು : ಆಧಾರ ಹೊಸ ನೊಂದಣಿ, ಕಡ್ಡಾಯ ಬಯೋಮೆಟ್ರಿಕ್ ನವೀಕರಣ, ಜೀವನ್ ಪ್ರಮಾಣ ಸೌಲಭ್ಯಗಳನ್ನು ನೀಡಲಾಗುತ್ತದೆ.
ಈ ವೇಳೆಯಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಟಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸೇರಿದಂತೆ ತಹಶೀಲ್ದಾರರು, ಕಂದಾಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್