ರಾಯಚೂರು, 15 ಜುಲೈ (ಹಿ.ಸ.) :
ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜುಲೈ 15ರಂದು ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತ್ಯುತ್ಸವ ನಡೆಯಿತು.
ಜಯಂತ್ಯುತ್ಸವ ನಿಮಿತ್ತ ಬೆಳಗ್ಗೆ ಬಸವೇಶ್ವರ ವ್ರತ್ತದಿಂದ ಆರಂಭಗೊಂಡ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರದ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಚಾಲನೆ ನೀಡಿದರು. ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ರಂಗಮಂದಿರಕ್ಕೆ ಬಂದು ಸೇರಿತು. ಸಮಾಜದ ಮುಖಂಡರು, ಅಧಿಕಾರಿಗಳು ಮತ್ತು ನಾಗರಿಕರು ರಂಗಮಂದಿರದವರೆಗೆ ಮೆರವಣಿಗೆಯಲ್ಲಿ ಸಾಲಾಗಿ ಸಾಗಿ ಮೆರವಣಿಗೆಯ ಕಳೆ ಹೆಚ್ಚಿಸಿದರು.
ರಂಗಮಂದಿರದಲ್ಲಿ ನಡೆದ ವೇದಿಕೆಯ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆಯ ಉಪಾಧ್ಯಕ್ಷರು ಆಗಿರುವ ಪ್ರಭಾರ ಅಧ್ಯಕ್ಷರಾದ ಜೆ.ಸಾಜಿದ್ ಸಮೀರ್ ಅವರು ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಕಾರ್ಯಕ್ರಮದಲ್ಲಿ ಹಟ್ಟಿ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯರಾದ ಕಮಲಾಬಾಯಿ ಅವರು ಶ್ರೀ ಶಿವಶರಣ ಹಡಪದ ಅಪ್ಪಣ್ಣ ಅವರ ಬಗ್ಗೆ ವಿಶೇಷ ಉಪನ್ಯಾಸ ನೀಡಿ, ಅಪ್ಪಣ್ಣನವರು ಜಾತಿ ಹಾಗೂ ಅಸಮಾನತೆಯ ವಿರುದ್ಧ ಹೋರಾಡಿದ ಮಹಾನ್ ಶರಣರಾಗಿದ್ದಾರೆ. ಸಮಾಜದಲ್ಲಿನ ದುರ್ಬಲರು, ಹಿಂದುಳಿದವರು, ಬಡವರ ಬದುಕಿನ ಬಗ್ಗೆ ತಿಳಿದು ಅವರ ಹಕ್ಕುಗಳಿಗಾಗಿ ಹೋರಾಡಲು ಅಪ್ಪಣ್ಣನವರು ತಮ್ಮ ಜೀವನವನ್ನು ಸಮರ್ಪಿಸಿಕೊಂಡರು ಎಂದು ತಿಳಿಸಿದರು.
ಅಪ್ಪಣ್ಣನವರು ಕೇವಲ ದೇವರ ಪೂಜೆ ಮಾಡುವ ವ್ಯಕ್ತಿಯಾಗದೇ ಕಾಯಕತತ್ತ್ವ, ಸಮಾನತೆಯ ದೃಷ್ಟಿಕೋಣ, ಮಾನವತೆಯ ಬಗ್ಗೆ ಸ್ಪಷ್ಟ ಚಿಂತನೆ ಹೊಂದಿದ್ದ ವ್ಯಕ್ತಿತ್ವವುಳ್ಳವರಾಗಿದ್ದರು. ಅಪ್ಪಣ್ಣನವರು ಹೊಂದಿದ್ದ ಸಾಮಾಜಿಕ ಕಾಳಜಿಯ ವ್ಯಕ್ತಿತ್ವವು, ಅವರ ಕಾಯಕತತ್ವವು ನಮಗೆ ಆದರ್ಶಪ್ರಾಯವಾಗಿದೆ ಎಂದರು.
ನಮ್ಮ ಸಮಾಜದಲ್ಲಿ ಈಗಲೂ ಜಾತಿ, ಮತ, ಭಾμÉಯ ಹೆಸರಿನಲ್ಲಿ ನಡೆಯುವ ಬೇಧ-ಭಾವದ ಬಗ್ಗೆ ಯುವಕರು ಅರಿಯಬೇಕು. ಜಾಗೃತರಾಗಬೇಕು. ಕೆಟ್ಟದಾದ ವ್ಯಸನಗಳಿಗೆ ಯಾರು ಸಹ ಬಲಿಯಾಗಬಾರದು ಎಂದು ತಿಳಿಸಿದರು.
ಸಾಧಕರಿಗೆ ಸನ್ಮಾನ: ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಯಶ ಸಾಧಿಸಿದ ಹಡಪದ ಅಪ್ಪಣ್ಣ ಸಮಾಜದ ವಿದ್ಯಾರ್ಥಿಗಳಿಗೆ, ಸರ್ಕಾರಿ ಸೇವೆಯಲ್ಲಿದ್ದು ನಿವೃತ್ತರಾದವರಿಗೆ ಸನ್ಮಾನಿಸಿ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಪರಶುರಾಮ್, ಹಡಪದ ಅಪ್ಪಣ್ಣ ಸಮಾಜದ ಗದ್ದೆಪ್ಪ ಎಂ, ಮಹಾಬಲೇಶ್ವರಪ್ಪ, ಕರಿಬಸವ ಗಟ್ಟಿಬಿಚ್ಚಾಲೆ, ನಾಗರಾಜ್ ಸರ್ಜಾಪುರ, ಧನಂಜಯ, ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶಿವಣ್ಣ, ಮುಖಂಡರಾದ ಮರಿಸ್ವಾಮಿ ಗಟ್ಟಿಬಿಚ್ಚಾಳಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಸಮಾರಂಭದಲ್ಲಿ ಸಮಾಜದ ಹಿರಿಯರು, ಮಹಿಳೆಯರು, ಯುವಕರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಕಾರ್ಯಕ್ರಮದ ಮೆರಗು ಹೆಚ್ಚಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್