ಸಿರುಗುಪ್ಪ, 15 ಜುಲೈ (ಹಿ.ಸ.) :
ಆ್ಯಂಕರ್ : ಕನ್ನಡ ಮತ್ತು ಸಂಸ್ಕøತಿ ಇಲಾಖೆಯ `ಚಿಗುರು ಸಾಂಸ್ಕೃತಿಕ’ ಕಾರ್ಯಕ್ರಮವು ಜುಲೈ 19 ರ ಶನಿವಾರ ಬೆಳಿಗ್ಗೆ 09 ಗಂಟೆಗೆ ಸಿರುಗುಪ್ಪ ತಾಲ್ಲೂಕಿನ ಶ್ರೀ ಯಲ್ಲಮ್ಮದೇವಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಆವರಣದಲ್ಲಿ ನಡೆಯಲಿದೆ.
ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಸಿರುಗುಪ್ಪ ವಿಧಾನಸಭೆ ಕ್ಷೇತ್ರದ ಶಾಸಕ ಬಿ.ಎಂ. ನಾಗರಾಜ ಅವರು ಅಧ್ಯಕ್ಷತೆ ವಹಿಸುವರು.
*ಸಾಂಸ್ಕೃತಿಕ ಕಾರ್ಯಕ್ರಮಗಳು:*
ಕಾರ್ಯಕ್ರಮದಲ್ಲಿ ಬಳ್ಳಾರಿಯ ವೀರ ಪಂಚಾಕ್ಷರಿ ಅವರಿಂದ ಕೊಳಲು ವಾದನ, ಗೌರಿ ಸೃಜನ ತಂಡದಿಂದ ಸುಗಮ ಸಂಗೀತ, ಸೂರ್ಯ ಕಲಾ ಟ್ರಸ್ಟ್ ಸಂಗಡಿಗರಿಂದ ಸಮೂಹ ನೃತ್ಯ, ಬಿ.ಸನ್ನಿದಿ ಜಿ.ಎಮ್ ತಂಡದಿಂದ ಜಾನಪದ ಗೀತೆ, ಸಿರುಗುಪ್ಪದ ಬಿ.ನವ್ಯ ಅವರಿಂದ ಏಕಪಾತ್ರಭಿನಯ (ತಾಯಿಯ ಮಮತೆ), ಜೆ.ಎಸ್.ಸಾಹಿತ್ಯ ಮತ್ತು ಸಂಗಡಿಗರಿಂದ ಮೊಬೈಲ್ ಲೋಕ ನಾಟಕ ಸೇರಿದಂತೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್