ಬೆಂಗಳೂರು, 15 ಜುಲೈ (ಹಿ.ಸ.) :
ಆ್ಯಂಕರ್ : ಯಶಸ್ವಿ ಬಾಹ್ಯಾಕಾಶ ಯಾತ್ರೆಯನ್ನು ಮುಗಿಸಿ, ಸುರಕ್ಷಿತವಾಗಿ ಭೂಮಿಗೆ ಮರಳಿದ ಶುಭಾಂಶು ಶುಕ್ಲಾ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಮೊದಲ ಭಾರತೀಯನೆಂಬ ದಾಖಲೆ ಬರೆದ ಅವರಿಗೆ ಅಭಿನಂದನೆಗಳು. ಇಡೀ ರಾಷ್ಟ್ರ ಈ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಂಡು ಹೆಮ್ಮೆಪಡುತ್ತಿದೆ.
ಶುಭಾಂಶು ಶುಕ್ಲಾರವರು ತಮ್ಮ ಪರಿಶ್ರಮ ಮತ್ತು ಧೈರ್ಯದ ಮೂಲಕ ಕೋಟ್ಯಂತರ ಜನರ ಕನಸುಗಳಿಗೆ ರೆಕ್ಕೆಯಾಗಿದ್ದಾರೆ. ಅವರ ಈ ಬಾಹ್ಯಾಕಾಶ ಪಯಣವು ಭವಿಷ್ಯದ ಸಂಶೋಧನೆಗಳ ಹಾದಿಯನ್ನು ಸುಗಮವಾಗಿಸಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ಈ ದಿನ ಹೊಸ ಮೈಲಿಗಲ್ಲು ಸಾಧಿಸಿದೆ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa