ಬಳ್ಳಾರಿ, 15 ಜುಲೈ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಗರೀಕ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಆಗ್ರಹಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿ ನಡೆಸುತ್ತಿರುವ ಒಂದು ಲಕ್ಷ ಸಹಿ ಸಂಗ್ರಹ ಚಳವಳಿಯು ಎಪಿಎಂಸಿ ಪ್ರದೇಶದಲ್ಲಿ ಮಂಗಳವಾರ ನಡೆಯಿತು.
ಬಳ್ಳಾರಿ ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಆರ್. ಸೋಮಶೇಖರಗೌಡ ಅವರು, ಜುಲೈ 27ರ ಭಾನುವಾರ ನಡೆಯಲಿರುವ ಜನತೆಯ ಸಮಾವೇಶದಲ್ಲಿ ಜನತೆಯ ಆಕ್ರೋಶಕದ ಸಹಿ ಸಂಗ್ರಹದ ದಾಖಲೆಯನ್ನು ಸಂಬಂಧಿಸಿದವರಿಗೆ ಸಲ್ಲಿಸಲಾಗುತ್ತದೆ ಎಂದು ಹೇಳಿದರು.
ಎಪಿಎಂಸಿ ಪ್ರದೇಶದಲ್ಲಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿಯ ಸದಸ್ಯರು ಸಹಿ ಸಂಗ್ರಹ ಚಳವಳಿಯನ್ನು ನಡೆಸುತ್ತಿರುವ ಸಂದರ್ಭದಲ್ಲಿ ನಾಗರೀಕರು ತಮ್ಮ ತಮ್ಮ ವಸತಿ - ಅಂಗಡಿಗಳ ನಿರ್ವಹಣೆ, ನೈರ್ಮಲ್ಯ, ಆರೋಗ್ಯ ಇನ್ನಿತರೆ ಮೂಲಭೂತ ಸಮಸ್ಯೆಗಳ ಕುರಿತು ಗಮನ ಸೆಳೆದರು.
ಸಹಿ ಸಂಗ್ರಹ ಅಭಿಯಾನದಲ್ಲಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿಯ ಸದಸ್ಯರಾದ ಗೋವಿಂದ್, ಗುರಳ್ಳಿರಾಜ, ಲಿಂಗರಾಜು ಇನ್ನಿತರರು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್