ರಾಯಚೂರು, 14 ಜುಲೈ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿ ಗುತ್ತಿಗೆ ಆಧಾರದ ಮೇಲೆ ಹುದ್ದೆಗಳ ನೇಮಕಾತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.
ಲಿಂಗಸೂಗೂರು ತಾಲೂಕಿನಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮಕ್ಕೆ ಮನೋವೈದ್ಯರು-01 ಹುದ್ದೆಗೆ ವೈದ್ಯಕೀಯ ಪದವೀಧರರು ಎಂ.ಬಿ.ಬಿ.ಎಸ್ ಮತ್ತು ಎಮ್.ಸಿ.ಐ ನಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಮನೋವೈದ್ಯಶಾಸ್ತ್ರದಲ್ಲಿ ಎಂ.ಡಿ ಅಥವಾ ಡಿ.ಪಿ.ಎಮ್ ಪದವಿ ಹೊಂದಿರಬೇಕು. ಕಮ್ಯೂನಿಟಿ ನರ್ಸ್ -01 ಹುದ್ದೆಗೆ ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ನರ್ಸಿಂಗ್‍ನಲ್ಲಿ ಬಿ.ಎಸ್.ಸಿ ನರ್ಸಿಂಗ್ ಪದವಿ (ಮೊದಲ ಅಧ್ಯತೆ) ಅಥವಾ ಜನರಲ್ ನರ್ಸಿಂಗ್ (ಜಿ.ಎನ್.ಎಮ್) ಪದವಿ ಪಡೆದಿರಬೇಕು.
ಆಪ್ತಸಮಾಲೋಚಕರು-01 ಹುದ್ದೆಗೆ ಸಮಾಜ ಸೇವಕರ ಸ್ನಾತಕೋತ್ತರ ಪದವಿ (ಎಂ.ಎಸ್.ಡಬ್ಲೂ) ಪಡೆದಿರಬೇಕು. ಹಾಗೂ ಆಪ್ತ ಸಮಾಲೋಚಕರು ಒಂದು ಹುದ್ದೆಗೆ ಗೌರವಧನದ ಪ್ರಕಾರ ಸ್ವ-ಹಸ್ತಾಕ್ಷರದಿಂದ ಅರ್ಜಿಯನ್ನು ಭರ್ತಿಮಾಡಿ ಹಾಗೂ ಹುದ್ದೆಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳೊಂದಿಗೆ ಎರಡು ಭಾವಚಿತ್ರದೊಂದಿಗೆ ಜುಲೈ 22ರ ಸಂಜೆ 5 ಗಂಟೆಯೊಳಗಾಗಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 8151896578ಗೆ ಸಂಪರ್ಕಿಸುವಂತೆ ಅಥವಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಾಲಯ ವಿಭಾಗವನ್ನು ಸಂಪರ್ಕ ಮಾಡಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್