ರಾಯಚೂರು, 12 ಜುಲೈ (ಹಿ.ಸ.)
ಆ್ಯಂಕರ್:
ಬೆಂಗಳೂರು–ಹುಬ್ಬಳ್ಳಿ ಎಕ್ಸ್ಪ್ರೆಸ್ (ಟ್ರೈನ್ ಸಂಖ್ಯೆ 17391/92) ರೈಲನ್ನು ಸಿಂಧನೂರವರೆಗೆ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೇ ಖಾತೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಅವರು ಶನಿವಾರ ಜಿಲ್ಲೆಯ ಸಿಂಧನೂರಿನ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದ್ದಾರೆ.
ಈ ವೇಳೆ ಸಚಿವರಾದ ವಿ.ಸೋಮಣ್ಣ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು 3 ನೇ ಭಾರಿಗೆ ದೇಶದ ಪ್ರಧಾನಿಗಳಾದ ನಂತರ ರೈಲ್ವೆ ಇಲಾಖೆಯಲ್ಲಿ ಹಲವು ಕ್ರಾಂತಿಕಾರಕ ಕೆಲಸ ಮಾಡಿದ್ದಾರೆ. ಅದರ ಭಾಗವಾಗಿ ಹಲವು ವರ್ಷಗಳ ಕನಸಿನ ರೈಲು ಸಂಚಾರಕ್ಕೆ ಇಂದು ಚಾಲನೆ ನೀಡಲಾಗಿದೆ ಎಂದರು.
ಜನತೆಗೆ ಉತ್ತಮ ಸಂಪರ್ಕ ಸೌಲಭ್ಯ ನೀಡುವ ಉದ್ದೇಶದಿಂದ ರೈಲ್ವೆ ಇಲಾಖೆ ಸಿಂಧನೂರಿಗೆ ಹೊಸದಾಗಿ ವಿಶೇಷ ರೈಲು ಸೇವೆ ಪ್ರಾರಂಭಿಸಿದೆ. ಈಗಾಗಲೇ ಸಿಂಧನೂರಿನಿAದ ಹುಬ್ಬಳ್ಳಿ ಕಡೆಗೆ ಪ್ರತಿದಿನ ಸಂಚರಿಸುತ್ತಿರುವ ಪ್ಯಾಸೆಂಜರ್ ರೈಲು (ಸಂಖ್ಯೆ 56927/56928) ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತ್ತಿದೆ. ಅತಿ ಹೆಚ್ಚಿನ ಪ್ರಮಾಣದಲ್ಲಿ ಜನರು ರೈಲು ಸೇವೆಯಿಂದ ಸಂತುಷ್ಟರಾಗಿದ್ದಾರೆ ಈಗ ಹೊಸದಾಗಿ ಹುಬ್ಬಳ್ಳಿ – ಬೆಂಗಳೂರು ಎಕ್ಸ್ಪ್ರೆಸ್ ರೈಲು (ಸಂಖ್ಯೆ 17391/17392) ಸೇವೆಯನ್ನು ಸಿಂಧನೂರಿನವರೆಗೆ ವಿಸ್ತರಿಸಿ ಈ ಭಾಗದ ಜನರ ನಿರೀಕ್ಷೆಯನ್ನು ಪೂರೈಸಲಾಗಿದೆ ಎಂದರು.
ಈ ರೈಲು ಪ್ರತಿ ದಿನ ಮಧ್ಯಾಹ್ನ 1.30 ಗಂಟೆಗೆ ಸಿಂಧನೂರಿನಿAದ ಹೊರಡಲಿದೆ. ನಂತರ ಗದಗ, ಅಣ್ಣಿಗೇರಿ, ಶಿಶ್ವಿನಹಳ್ಳಿ ಮೂಲಕ ಸಂಜೆ 6 ಗಂಟೆಗೆ ಹುಬ್ಬಳ್ಳಿಗೆ ಆಗಮಿಸುತ್ತದೆ. ಅಲ್ಲಿಂದ 6.45 ಗಂಟೆಗೆ ಹೊರಟು, ರಾತ್ರಿ 3.55 ಕ್ಕೆ ಬೆಂಗಳೂರಿಗೆ ತಲುಪಲಿದೆ. ಅಲ್ಲದೆ ಪ್ರತಿ ದಿನ ಬೆಂಗಳೂರಿನಿAದ ರಾತ್ರಿ 12.15ಕ್ಕೆ ಹೊರಡುವ ರೈಲು (ಸಂಖ್ಯೆ 17391) ಬೆಳಗ್ಗೆ 9ಕ್ಕೆ ಹುಬ್ಬಳ್ಳಿಗೆ ತಲುಪುತ್ತದೆ, ಮಧ್ಯಾಹ್ನ 2.30 ಕ್ಕೆ ಸಿಂಧನೂರಿಗೆ ನಿಲ್ದಾಣವನ್ನು ತಲುಪಲಿದೆ.
ಈ ಹೊಸ ರೈಲು ಸೇವೆಯು ಸಿಂಧನೂರು ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ಶ್ರೇಷ್ಠ ಸಂಚಾರ ಸಂಪರ್ಕವನ್ನು ಕಲ್ಪಿಸಿ, ಈ ಭಾಗದ ವಾಣಿಜ್ಯ ಚಟುವಟಿಕೆಗಳಿಗೆ ಬಲ ನೀಡಲಿದೆ ಅಲ್ಲದೆ ಕೈಗಾರಿಕಾ ವಿಸ್ತರಣೆಗೆ ಅನುಕೂಲವಾಗಲಿದೆ. ಶೈಕ್ಷಣಿಕ ಅಭ್ಯುದಯಕ್ಕೆ ಹಾಗೂ ಕೃಷಿಕರ ಉತ್ಪನ್ನಗಳನ್ನು ದೊಡ್ಡ ಮಾರುಕಟ್ಟೆಗೆ ತಲುಪಿಸಲು ಸಹಕಾರಿಯಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಕೊಪ್ಪಳ ಲೋಕಸಭಾ ಸಂಸದರಾದ ಕೆ.ರಾಜಶೇಖರ ಹಿಟ್ನಾಳ, ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ಸಿಂಧನೂರು ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರು ಆಗಿರುವ ಮಸ್ಕಿ ಕ್ಷೇತ್ರದ ಶಾಸಕರಾದ ಆರ್.ಬಸನಗೌಡ ತುರ್ವಿಹಾಳ,, ಲಿಂಗಸಗೂರು ಕ್ಷೇತ್ರದ ಶಾಸಕರಾದ ಮಾನಪ್ಪ ಡಿ.ವಜ್ಜಲ್, ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ.ಶಿವರಾಜ ಎಸ್.ಪಾಟೀಲ್, ವಿಧಾನ ಪರಿಷತ್ ಶಾಸಕರಾದ ಶರಣಗೌಡ ಪಾಟೀಲ ಬಯ್ಯಾಪುರ, ಬಸನಗೌಡ ಬಾದರ್ಲಿ, ಮಾಜಿ ಲೋಕಸಭಾ ಕ್ಷೇತ್ರದ ಸದಸ್ಯರಾದ ವಿರುಪಾಕ್ಷಪ್ಪ, ಮಾಜಿ ಸಚಿವ ನಾಡಗೌಡ ವೆಂಕಟರಾವ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಬೇಲಾ ಮೀನಾ, ಪ್ರಧಾನ ವಾಣಿಜ್ಯ ವ್ಯವಸ್ಥಾಪಕರಾದ ಎಸ್ .ಪಿ .ಶಾಸ್ತ್ರೀ, ಮುಖ್ಯ ವಾಣಿಜ್ಯ ವ್ಯವಸ್ಥಾಪಕರಾದ ಡಾ .ಅನೂಪ ದಯಾನಂದ ಸಾಧು, ವಿಭಾಗೀಯ ರೈಲ್ವೆ ಹೆಚ್ಚುವರಿ ವ್ಯವಸ್ಥಾಪಕರಾದ ಟಿ.ವಿ.ಭೂಷಣ, ವರಿಷ್ಠ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಸಂತೋಷ ಹೆಗಡೆ , ಗತಿ ಶಕ್ತಿ ವಿಭಾಗದ ಯೋಜನಾ ವ್ಯವಸ್ಥಾಪಕ ಸಂಜಯ ಕುಮಾರ , ವಿಭಾಗೀಯ ಪ್ರಧಾನ ಕಾರ್ಯಾಚರಣೆ ವ್ಯವಸ್ಥಾಪಕರಾದ ಅರವಿಂದ ಹರ್ಲೆ, ವಿಭಾಗೀಯ ಸುರಕ್ಷಾ ಆಯುಕ್ತ ಅಲೋಕ ಕುಮಾರ ಸೇರಿದಂತೆ ಇತರರು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್