ಸಮಾನತೆಯ ಧ್ವನಿ ಎತ್ತಿದ ವಿಶ್ವದ ಮೊದಲ ಸಾಹಿತ್ಯ ಶರಣ ಸಾಹಿತ್ಯ : ಪ್ರೇಮಿ
ಕೊಪ್ಪಳ, 12 ಜುಲೈ (ಹಿ.ಸ.) : ಆ್ಯಂಕರ್ : ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಹಿಂದಿ ವಿಭಾಗದಿಂದ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ನಡೆಯಿತು. ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಹಿಂದಿ ಪ್ರಾಧ್ಯಾಪಕರಾದ ಡಾ. ಪ್ರಭಾಶಂಕರ ಪ್ರೇಮಿ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ
ಸಮಾನತೆಯಧ್ವನಿ ಎತ್ತಿದ ವಿಶ್ವದ ಮೊದಲ ಸಾಹಿತ್ಯ ಕನ್ನಡದ ಶರಣ ಸಾಹಿತ್ಯ: ಪ್ರೇಮಿ


ಸಮಾನತೆಯಧ್ವನಿ ಎತ್ತಿದ ವಿಶ್ವದ ಮೊದಲ ಸಾಹಿತ್ಯ ಕನ್ನಡದ ಶರಣ ಸಾಹಿತ್ಯ: ಪ್ರೇಮಿ


ಕೊಪ್ಪಳ, 12 ಜುಲೈ (ಹಿ.ಸ.) :

ಆ್ಯಂಕರ್ : ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಹಿಂದಿ ವಿಭಾಗದಿಂದ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ನಡೆಯಿತು.

ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಹಿಂದಿ ಪ್ರಾಧ್ಯಾಪಕರಾದ ಡಾ. ಪ್ರಭಾಶಂಕರ ಪ್ರೇಮಿ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ, ಶರಣ ಸಾಹಿತ್ಯವು ಭಕ್ತಿಯಿಂದ ಜನಿತವಾದುದು. ಆದ್ಯಾತ್ಮದಿಂದ ಪೋಷಿತವಾದುದು. ಸಮಾನತೆಯಿಂದ ಅಮೃತವಾದುದು ಎಂದರು.

ಸಮಾನತೆಯ ಧ್ವನಿ ಎತ್ತಿದ ವಿಶ್ವದ ಮೊದಲ ಸಾಹಿತ್ಯ ಕನ್ನಡದ ಶರಣ ಸಾಹಿತ್ಯವಾಗಿದೆ. ಇದು ದೇವರನ್ನು ಅರಸುವ - ಹುಡುಕುವ ಸಾಹಿತ್ಯವಲ್ಲ. ಮಾನವಿಯತೆ, ನ್ಯಾಯ, ಶುದ್ಧತೆ ಹಾಗೂ ಸಮಾನತೆಯ ಬಾಳ್ವೆಯ ಸಂಕೇತವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಭಾಗ್ಯಜ್ಯೋತಿ ಅವರು, ಶರಣ ಸಾಹಿತ್ಯದಲ್ಲಿ ಭಕ್ತಿ ಸರ್ವೋಚ್ಚ ಸ್ಥಾನ ಪಡೆದಿದೆ. ಶರಣರು ದೇವರನ್ನು ಮನುಷ್ಯನ ಹೃದಯದಲ್ಲಿ ಕಾಣಲು ಬಯಸಿದರು. ಇವರು ಪೂಜೆ, ಯಜ್ಞ, ತಪಸ್ಸುಗಳಿಗಿಂತ ಪ್ರಾಮಾಣಿಕ ಜೀವನವನ್ನೇ ಭಕ್ತಿಯ ರೂಪವೆಂದು ನಂಬಿದವರು ಎಂದರು.

ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಚನ್ನಬಸವ, ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಹಿಂದಿ ವಿಭಾಗದ ಪ್ರಾಧ್ಯಾಪಕರಾದ ಡಾ.ದಯಾನಂದ ಸಾಳುಂಕೆ ಸ್ವಾಗತಿಸಿದರು. ಡಾ. ಸುಂದರ ಮೇಟಿ ಅವರು ಕಾರ್ಯಕ್ರಮ ನಿರೂಪಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande