ಅಧ್ಯಾತ್ಮ ಚಿಂತಕಿ ಶರಣೆ ಸಂಕವ್ವೆ - ಡಾ.ಶಿವಲೀಲಾ ಬಸನಗೌಡ
ರಾಯಚೂರು, 12 ಜುಲೈ (ಹಿ.ಸ.) : ಆ್ಯಂಕರ್ : ಎಲ್ಲಾ ವರ್ಗದ ಮಹಿಳೆಯರಿಗೂ ಅಕ್ಷರ ಜ್ಞಾನ ನೀಡಿ 36 ಕ್ಕೂ ಹೆಚ್ಚು ಜನ ಶರಣೆಯರು ವಚನ ರಚನೆಗೆ ಅವಕಾಶವನ್ನು ಮಹಾಮನೆಯ ಮೂಲಕ ಬಸವಣ್ಣವನರು ಕಲ್ಪಸಿಕೊಟ್ಟರು ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಅತಿಥಿ ಉ
ಅಧ್ಯಾತ್ಮ ಚಿಂತಕಿ ಶರಣೆ ಸಂಕವ್ವೆ - ಡಾ.ಶಿವಲೀಲಾ ಬಸನಗೌಡ


ರಾಯಚೂರು, 12 ಜುಲೈ (ಹಿ.ಸ.) :

ಆ್ಯಂಕರ್ : ಎಲ್ಲಾ ವರ್ಗದ ಮಹಿಳೆಯರಿಗೂ ಅಕ್ಷರ ಜ್ಞಾನ ನೀಡಿ 36 ಕ್ಕೂ ಹೆಚ್ಚು ಜನ ಶರಣೆಯರು ವಚನ ರಚನೆಗೆ ಅವಕಾಶವನ್ನು ಮಹಾಮನೆಯ ಮೂಲಕ ಬಸವಣ್ಣವನರು ಕಲ್ಪಸಿಕೊಟ್ಟರು ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಅತಿಥಿ ಉಪನ್ಯಾಸಕಿ ಡಾ. ಶಿವಲೀಲಾ ಬಸನಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ನಡೆದ ಇಂಗ್ಲಿಷ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ ಸಮಾರಂಭ ಹಾಗೂ `ಭಾರತೀಯ ವಚನ ಸಾಹಿತ್ಯಕ್ಕೆ ಸೂಳೆ ಸಂಕವ್ವೆ ಕೊಡುಗೆ’ ವಿಷಯದ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಶರಣೆ ಸಂಕವ್ವೆ ಬಸವಣ್ಣನವರ ವಚನ ಚಳವಳಿಯ ಪ್ರಭಾವದಿಂದ ಶರಣೆ ಸಂಕವ್ವೆ ತನ್ನ ವೇಶ್ಯಾವೃತ್ತಿಯನ್ನು ಸಂಪೂರ್ಣ ತೊರೆದು, ಸತ್ಯ ಶುದ್ಧ ಕಾಯಕ ಮಾಡಿ ಕಲ್ಯಾಣದ ಮಹಾಮನೆಗೆ ಕ್ರಾಂತಿ ಜ್ಯೋತಿಯಾದಳು. ಅಧ್ಯಾತ್ಮದ ದೃಷ್ಟಿಯಿಂದ ಸಂಕವ್ವೆ ಅವರ ವಚನಗಳನ್ನು ನಾವು ಅರಿಯಬೇಕು ಎಂದರು.

ವಚನ ಯುಗವು ಮಹಿಳೆಯರ ಆಂತರ್ಯದಲ್ಲಿ ನವ ಜಾಗೃತಿ, ನವಸಾಕ್ಷರತೆಯ ಅರಿವು ಮೂಡಿಸಿ, ಶರಣರ ಪ್ರಭಾವಕ್ಕೆ ಒಳಗಾದ ಶರಣೆ ಸಂಕವ್ವೆ ಆದರ್ಶ ಬದುನ್ನು ಕಟ್ಟಿಕೊಂಡರು. ಸೂಳೆ ಸಂಕವ್ವೆ ಅವರು ರಚಿಸಿರುವ ವಚನಗಳಲ್ಲಿ ಕಾಯಕನಿಷ್ಠೆ, ವ್ರತನಿಷ್ಠೆ ಮತ್ತು ಏಕದೇವ ನಿಷ್ಠೆಯ ಆಶಯಗಳು ಕಂಡು ಬರುತ್ತವೆ ಎಂದರು.

ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಪ್ರೊ.ಪಾರ್ವತಿ ಸಿ.ಎಸ್. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, 12 ನೇ ಶತಮಾನದ ಮಹಾಮನೆ ಅನುಭವ ಮಂಟಪದಲ್ಲಿ ಯಾವುದೇ ಲಿಂಗ, ಜಾತಿ, ತಾರತಮ್ಯ ಇರಲಿಲ್ಲ. ಪ್ರತಿಯೊಬ್ಬರಿಗೂ ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸುವ ಅವಕಾಶವಿತ್ತು. ಕಾರಣ ಶಿವಶರಣೆ ಸಂಕವ್ವೆ ಮಾತೃ ಭಾಷೆ ಕನ್ನಡದಲ್ಲಿ ವಚನಗಳನ್ನು ರಚಿಸಿದ್ದಾರೆ ಎಂದರು.

ಕಲಾ ವಿಭಾಗದ ಡೀನರಾದ ಡಾ.ಲತಾ.ಎಂ.ಎಸ್, ಇಂಗ್ಲಿಷ್ ವಿಭಾಗದ ಅತಿಥಿ ಉಪನ್ಯಾಸಕರಾದ ಅನಿಲ್ ಅಪ್ರಾಳ್ ಉಪನ್ಯಾಸವನ್ನು ಇಂಗ್ಲಿಷ್‍ನಲ್ಲಿ ಅನುವಾದಿಸಿದರು. ಡಾ. ಆನಂದ.ಜೆ.ಯರಗೇರಾ, ಡಾ.ಮಹಮ್ಮದ್ ಆಸಿಫ್ ವೇದಿಕೆ ಮೇಲೆ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಶಗುಫ್ತ ಸ್ವಾಗತಿಸಿದರು. ಸಿದ್ರಾ ಕಾರ್ಯಕ್ರಮ ನಿರೂಪಿಸಿದರು, ರಾಖೇಶ್ ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande