ಅಹಮದಾಬಾದ್ ವಿಮಾನ ಅಪಘಾತದ ಪ್ರಾಥಮಿಕ ವರದಿ ಬಿಡುಗಡೆ
ನವದೆಹಲಿ, 12 ಜುಲೈ (ಹಿ.ಸ.) : ಆ್ಯಂಕರ್ : ಜೂನ್ 12ರಂದು ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ (AI 171) ವಿಮಾನ ಅಪಘಾತದ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ ಇಂದು ತನ್ನ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿದೆ. 15 ಪುಟಗಳ ವರದಿಯನ್ನು ಏರ್ ಇಂಡಿಯಾ ಸಂಸ್ಥೆ ಸ್ವೀಕರಿಸಿದ್ದು, ತನಿಖೆಗೆ ಸಂ
Report


ನವದೆಹಲಿ, 12 ಜುಲೈ (ಹಿ.ಸ.) :

ಆ್ಯಂಕರ್ : ಜೂನ್ 12ರಂದು ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ (AI 171) ವಿಮಾನ ಅಪಘಾತದ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ ಇಂದು ತನ್ನ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿದೆ.

15 ಪುಟಗಳ ವರದಿಯನ್ನು ಏರ್ ಇಂಡಿಯಾ ಸಂಸ್ಥೆ ಸ್ವೀಕರಿಸಿದ್ದು, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ.

ವರದಿಯ ಪ್ರಕಾರ, ವಿಮಾನ ಟೇಕ್ ಆಫ್ ಆದ ಬಳಿಕ ಕೇವಲ 90 ಸೆಕೆಂಡುಗಳೊಳಗೆ ಎರಡೂ ಎಂಜಿನ್‌ಗಳು ನಿಂತು ಹೋಗಿವೆ. ಈ ತಾಂತ್ರಿಕ ವೈಫಲ್ಯದಿಂದಾಗಿ ವಿಮಾನವು ಅತೀ ವೇಗವಾಗಿ ನೆಲಕಪ್ಪಳಿಸಿದ್ದು, ಪೈಲಟ್‌ಗಳಿಗೆ ವಿಮಾನ ನಿಯಂತ್ರಿಸಲು ಯಾವುದೇ ಸಂದರ್ಭ ಸಿಕ್ಕಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಏರ್ ಇಂಡಿಯಾ ಪ್ರತಿಕ್ರಿಯೆ

ಈ ದುರ್ಘಟನೆಯ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳ ಜೊತೆ ನಾವು ಬದ್ಧವಾಗಿದ್ದೇವೆ. ಈ ಅಪಾರ ನಷ್ಟದ ಹೊತ್ತು ಸಹಾಯ ಮಾಡುವುದಕ್ಕೆ ನಾವು ಸಿದ್ಧರಾಗಿದ್ದೇವೆ, ಎಂದು ಏರ್ ಇಂಡಿಯಾ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚು ವಿವರಗಳನ್ನು ಬಹಿರಂಗಪಡಿಸಲು ಸಂಸ್ಥೆ ನಿರಾಕರಿಸಿದ್ದು, ತನಿಖೆಯ ಪ್ರಗತಿಯ ಹಂತವನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ನಿರ್ದಿಷ್ಟ ಮಾಹಿತಿಯನ್ನು ಈಗಲೇ ಹಂಚಿಕೊಳ್ಳುವುದು ಸೂಕ್ತವಲ್ಲ, ಎಂದಿದೆ.

ಅಂತಿಮ ವರದಿಗೆ ನಿರೀಕ್ಷೆ

ಅಪಘಾತದ ಅಂತಿಮ ತನಿಖಾ ವರದಿ ಮುಂದಿನ ಕೆಲ ತಿಂಗಳುಗಳಲ್ಲಿ ಪ್ರಕಟವಾಗಲಿದ್ದು, ಅದರಲ್ಲಿ ಘಟನೆಯ ನಿಖರ ಕಾರಣಗಳು, ತಾಂತ್ರಿಕ ದೋಷಗಳ ವಿವರಗಳು ಹಾಗೂ ನಿರ್ವಹಣಾ ಲೋಪಗಳಿರುವೆಯೇ ಎಂಬುದರ ಕುರಿತು ವಿವರಣೆ ನಿರೀಕ್ಷಿಸಲಾಗಿದೆ

ಈ ಭೀಕರ ದುರಂತದಲ್ಲಿ 260 ಮಂದಿ ಮೃತಪಟ್ಟಿದ್ದರು, ಮೃತರಲ್ಲಿ 229 ಪ್ರಯಾಣಿಕರು, 12 ಸಿಬ್ಬಂದಿ ಸದಸ್ಯರು, ಹಾಗೂ ನೆಲದ ಮೇಲೆ ಇದ್ದ 19 ಸಾರ್ವಜನಿಕರು ಸೇರಿದ್ದಾರೆ. ಇದು ಇತ್ತೀಚಿನ ಕಾಲದ ಅತ್ಯಂತ ಭೀಕರ ವಿಮಾನ ಅಪಘಾತಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande