ರಾಯಚೂರು, 12 ಜುಲೈ (ಹಿ.ಸ.) :
ಆ್ಯಂಕರ್ : ನವ ವಿವಾಹಿತೆ ಸೆಲ್ಫಿ ಪೋಟೋ ತೆಗೆಯುವ ನೆಪದಲ್ಲಿ ಪತಿಯನ್ನು ನದಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ ಘಟನೆ ರಾಯಚೂರಿನ ಗುರ್ಜಾಪುರ ಸೇತುವೆ ಕಂ ಬ್ಯಾರೇಜ್ ಬಳಿ ನಡೆದಿದೆ.
ಪತಿಯ ಜೊತೆ ಬೈಕ್‍ನಲ್ಲಿ ಬಂದಿದ್ದ ಪತ್ನಿ ಖತರ್ನಾಕ್ ಪ್ಲಾನ್ ಮಾಡಿದ್ದಾಳೆ. ಸೇತುವೆ ಮೇಲೆ ಫೆÇೀಟೋ ತೆಗೆಸಿಕೊಳ್ಳುವ ರೀತಿ ನಾಟಕ ಮಾಡಿದ ಪತ್ನಿ, ಮೊದಲು ತಾನು ಫೆÇೀಟೋ ತೆಗೆಸಿಕೊಂಡು, ನಂತರ ಪತಿಯನ್ನು ಸೇತುವೆ ತುದಿಗೆ ನಿಲ್ಲಿಸಿ, ಫೋಟೋ ತೆಗೆಯುವ ನೆಪದಲ್ಲಿ ನದಿಗೆ ತಳ್ಳಿದ್ದಾಳೆ.
ನದಿಗೆ ಬಿದ್ದ ಯುವಕನು ನದಿಯ ಮಧ್ಯೆ ಈಜಿಕೊಂಡು ಹೋಗಿ ಬಂಡೆಯೊಂದರ ಮೇಲೆ ಕುಳಿತುಕೊಂಡು, ರಕ್ಷಣೆಗಾಗಿ ಕಿರುಚುತ್ತಾ, ಸೇತುವೆಯ ಮೇಲೆ ತಿರುಗಾಡುವವರನ್ನು ಕೂಗಿ ಕರೆಯುತ್ತಾ, ತನ್ನನ್ನು ರಕ್ಷಣೆ ಮಾಡಲು, ಸೇತುವೆಯ ಮೇಲೆ ನಿಂತಿದ್ದ ಪತ್ನಿಯನ್ನು ಹಿಡಿದಿಟ್ಟುಕೊಳ್ಳಲು ಕೂಗಿ ಕೇಳುತ್ತಾನೆ.
ಯುವಕನ ಕಿರುಚಾಟ ಕೇಳಿದ ಅಕ್ಕಪಕ್ಕದಲ್ಲಿದ್ದವರು, ರಕ್ಷಣೆಗೆ ಆಗಮಿಸಿ, ದೊಡ್ಡದಾದ ಹಗ್ಗವನ್ನು ಯುವಕನಲ್ಲಿಗೆ ಕಳುಹಿಸಿ, ಸೇತುವೆಯ ಕಡೆಗೆ ಎಳೆದುಕೊಂಡು ರಕ್ಷಣೆ ಮಾಡಿದ್ದಾರೆ. ಸುಮಾರು 2 ಗಂಟೆಗಳ ಕಾಲ ನದಿಯಲ್ಲಿದ್ದ ಕಲ್ಲುಗುಂಡಿನ ಮೇಲೆ ಯುವಕನು ಕೂತಿದ್ದನು.
ರಾಯಚೂರು ಶಕ್ತಿನಗರದ ನವದಂಪತಿ ನಡುವೆ ಗಲಾಟೆ ಇದಾಗಿದ್ದು, ಪತಿಯನ್ನು ಕೊಲೆ ಮಾಡಲು ಪತ್ನಿ ಪ್ಲಾನ್ ಮಾಡಿದ್ದಳು ಎಂದು ಹೇಳಲಾಗಿದೆ.
ಆದರೆ, ಈ ಘಟನೆಯ ಕುರಿತು ಯಾವುದೇ ದೂರು ದಾಖಲಾಗಿಲ್ಲ. ಎರೆಡೂ ಕುಟುಂಬಗಳವರು ಸೌಹಾರ್ದಯುತವಾಗಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್