ವಿದ್ಯಾರ್ಥಿಗಳಿಗೆ ಚುನಾವಣೆ ಬಗ್ಗೆ ಅರಿವು ಮೂಡಿಸಲು ಅಣುಕು ಸಂಸತ್ ಚುನಾವಣೆ
ವಿದ್ಯಾರ್ಥಿಗಳಿಗೆ ಚುನಾವಣೆ ಬಗ್ಗೆ ಅರಿವು ಮೂಡಿಸಲು ಅಣುಕು ಸಂಸತ್ ಚುನಾವಣೆ
ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಸಮೀಪ ಸುಂದರಪಾಳ್ಯ ಶ್ರೀ ವೆಂಕಟೇಶ್ವರ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಅಣುಕು ಸಂಸತ್ ಚುನಾವಣೆ ನಡೆಯಿತು.


ಕೋಲಾರ, ೧೨ ಜುಲೈ (ಹಿ.ಸ) :

ಆ್ಯಂಕರ್ : ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಧಿಯಲ್ಲಿ ಸಂವಿಧಾನ ಮತ್ತು ಚುನಾವಣೆಯ ಬಗ್ಗೆ ಅರಿವು ಮೂಡಿಸಲು ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಸಮೀಪದ ಸುಂದರಪಾಳ್ಯ ಗ್ರಾಮದಲ್ಲಿರುವ ಶ್ರೀ ವೆಂಕಟೇಶ್ವರ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶಾಲಾ ಸಂಸತ್ತು ಅಣುಕು ಚುನಾವಣೆಯನ್ನು ಆಯೋಜಿಸಲಾಯಿತು.

ವಿದ್ಯಾರ್ಥಿಗಳಿಗೆ ಚುನಾವಣೆಯ ಬಗ್ಗೆ ಜಾಗೃತಿಯನ್ನು ಮೂಡಿಸುವುದರ ಜೊತೆಗೆ ಶಾಲೆಯ ನಾಯಕ ಮತ್ತು ಉಪನಾಯಕನ ಹುದ್ದೆಗೆ ಚುನಾವಣೆಯನ್ನು ನಡೆಸಿದರು. ಶಾಲೆಯ ಬೋಧಕ ಸಿಬ್ಬಂದಿ ಅವರು ಚುನಾವಣಾ ಅಧಿಕಾರಿಗಳಾಗಿದ್ದು ಸಾಮಾನ್ಯ ಚುನಾವಣೆಯಲ್ಲಿ ಮತದಾರರು ತಮ್ಮ ಗುರುತಿನ ಚೀಟಿಯನ್ನು ತೋರಿಸಿ ಮತದಾನ ಕೇಂದ್ರಗಳಲ್ಲಿ ಮತವನ್ನು ಚಲಾಯಿಸುತ್ತಾರೋ ಅದೇ ರೀತಿ ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡ್ ಮತ್ತು ಶಾಲೆಯ ಗುರುತಿನ ಚೀಟಿಯನ್ನು ತೋರಿಸಿ ಯಶಸ್ವಿಯಾಗಿ ಮತದಾನ ನಡೆಸಿ ಬೆರಳಿಗೆ ಬಣ್ಣ ಹಚ್ಚಿದ್ದರು ಇದೆಲ್ಲವೂ ಕಡ್ಡಾಯ ಮತದಾನಕ್ಕೆ ಪ್ರೇರಣೆಯಾಗಲಿದೆ ಎಂದು ತಿಳಿಸಿದರು.

ಚುನಾವಣೆಯಲ್ಲಿ ತಲಾ ೮ ಮಂದಿ ಅಭ್ಯರ್ಥಿಗಳು ತಮ್ಮ ಉಮೇದುವರಿಕೆಯನ್ನು ಸಲ್ಲಿಸಿ ಚುನಾವಣೆಯಲ್ಲಿ ಪಾಲ್ಗೊಂಡರು. ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸಿಕೊಂಡರು ಒಟ್ಟು ಸುಮಾರು ೪೩೦ ವಿದ್ಯಾರ್ಥಿಗಳು ಮತವನ್ನು ಚಲಾಯಿಸುವುದರ ಮೂಲಕ ತಮ್ಮ ನಾಯಕ ಮತ್ತು ಉಪನಾಯಕನನ್ನು ಆಯ್ಕೆ ಮಾಡಿಕೊಂಡರು ನಂತರ ಚುನಾವಣೆ ಫಲಿತಾಂಶವನ್ನು ಪ್ರಕಟಿಸಿ ೧೮೯ ಮತಗಳನ್ನು ಪಡೆದಂತ ೯ನೇ ತರಗತಿಯ ಕುಶಾಲ್ ನಾಯಕರಾಗಿ ಆಯ್ಕೆಯಾದರು ಹಾಗೂ ೧೧೭ ಮತಗಳನ್ನು ಪಡೆದ ೭ನೇ ತರಗತಿಯ ಮಧು.ಕೆ ಅವರು ಉಪ ನಾಯಕರಾಗಿ ಆಯ್ಕೆಯಾದರು ಎಂದು ತಿಳಿಸಿದರು.

ಚುನಾವಣೆಯಲ್ಲಿ ಜಯಶೀಲರಾದವರಿಗೆ ಕಾರ್ಯದರ್ಶಿಗಳಾದ ಎಸ್.ವಿ ಗುರುಪ್ರಸಾದ್ ಅವರು ಅಭಿನಂದನೆ ಸಲ್ಲಿಸಿದ್ದರು ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಶ್ರೀಮತಿ ಸುಮಂಗಳ ಹಾಗೂ ಎಲ್ಲಾ ಶಿಕ್ಷಕ ವರ್ಗದವರು ಶುಭ ಕೋರಿದರು.

ಚಿತ್ರ : ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಸಮೀಪ ಸುಂದರಪಾಳ್ಯ ಶ್ರೀ ವೆಂಕಟೇಶ್ವರ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಅಣುಕು ಸಂಸತ್ ಚುನಾವಣೆ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande