ಮಸ್ಕಿ, 12 ಜುಲೈ (ಹಿ.ಸ.) :
ಆ್ಯಂಕರ್ : ಸಂಸ್ಥೆ ಕಟ್ಟುವುದು ಸುಲಭ, ನಡೆಸುವುದು ಕಷ್ಟ, 3,300 ಜನರಿಗೆ ಸಾಲ ನೀಡಿ ಅವರನ್ನು ಸ್ವಂತ ಮಾಲಕರನ್ನಾಗಿ ಮಾಡಿದ ಈ ಸಂಸ್ಥೆಯನ್ನು ನಾನು ಹಾರ್ಧಿಕವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.
ದುಡಿಯುವ ಮನಸ್ಸು ಮತ್ತು ಸಾಧಿಸುವ ಛಲ ಇರುವ ಸಾವಿರಾರು ಕಿರು ಕಸುಬುದಾರರಿಗೆ ನೆರವಿನ ಹಸ್ತಚಾಚುವ ಮೂಲಕ ಜನಸಾಮಾನ್ಯರಿಗೂ ಬದುಕು ಕಟ್ಟುವ ಭರವಸೆ ನೀಡಿದ ಶ್ರೀ ರಾಮಲಿಂಗೇಶ್ವರ ಪತ್ತಿನ ಸೌಹಾರ್ದ ಸಹಕಾರ ಸಂಘ (ನಿ)ದ ರಜತ ಮಹೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡ ಅವರು, ಬೆಳ್ಳಿಹಬ್ಬ ಸಂಭ್ರಮಾಚರಣೆ ಅಂಗವಾಗಿ ನಿರ್ಮಿಸಿದ ಸಂಘದ ನೂತನ ಕಟ್ಟಡದ ಉದ್ಘಾಟನೆ ನೆರೆವೇರಿಸಿದರು.
ನಂತರ ಪಟ್ಟಣದ ಶ್ರೀ ಬ್ರಹ್ಮರಂಬ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ರಜತಾ ಮಹೋತ್ಸವ ಕಾರ್ಯಕ್ರಮದ ದೀಪ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ಗುರು ರಾಮಲಿಂಗೇಶ್ವರ ಸಂಸ್ಥೆ ಮಸ್ಕಿ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದೆ. ಸಾಕಷ್ಟು ಬಡ ಕುಟುಂಬಗಳಿಗೆ, ಸಾಲ ನೀಡಿ ಉತ್ತಮ ಸೇವೆ ನೀಡಿದೆ. ಸಂಸ್ಥೆ ನಡೆಯುವುದು ಪ್ರಾಮಾಣಿಕತೆಯಿಂದ, ಸಂಸ್ಥೆ ಗಳನ್ನು ಕಟ್ಟೋದು ತುಂಬಾ ಸುಲಭ ಆದರೆ ಸಂಸ್ಥೆ ಉಳಿಸಿಕೊಳ್ಳೋದು ತುಂಬಾ ಕಷ್ಟ, ಮನೆ ಯಜಮಾನ ಸರಿಯಾಗಿದ್ದರೆ ಮಾತ್ರ ಮನೆ ಸರಿಯಾಗಿರೋದು, ಜನ ಸಾಮಾನ್ಯರಿಗೆ ತುಂಬಾ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಸಂಸ್ಥೆಯ ಆಡಳಿತ ನಡೆಸುತ್ತಿರುವ ತುಂಬಾ ಸಂತೋಷದ ವಿಷಯ ಎಂದರು.
ನಾನು ಪ್ರತಿನಿತ್ಯ ನೂರಾರು ಸಹಕಾರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಕಾರ್ಯಕ್ರಮಕ್ಕೆ ಹೋಗುತ್ತೇನೆ. ಆದರೆ ಮಸ್ಕಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರು ತುಂಬಾ ಕಠಿಣ ಪರಿಶ್ರಮದಿಂದ ದುಡಿದು ಬೆಳೆದಿದ್ದಾರೆ. ಶ್ರೀ ಗುರು ರಾಮಲಿಂಗೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದ (ನಿ), ಇನ್ನು ಹೆಚ್ಚಿನ ಯೋಜನೆಗಳನ್ನು ರೂಪಿಸುವಲ್ಲಿ ಯಶಸ್ವಿ ಕಾಣಲಿ. ಜೊತೆಗೆ ಸಂಸ್ಥೆ ಮುಂದಕ್ಕೆ ಉತ್ತಮ ಸಂಸ್ಥೆಯಾಗಿ ರಾಜ್ಯ ಮಟ್ಟದಲ್ಲಿ ಬೆಳಗಲಿ ಎಂದು ಹಾರೈಸಿದರು.
ನಂತರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಸಂಸ್ಥೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿ, ಉಜ್ವಲ ಆಗಿ ಬೆಳೆದು 60 ಕೋಟಿ ಗಿಂತಲೂ ಹೆಚ್ಚು ವ್ಯವಹಾರ ನಡೆಸಿ, ಸಣ್ಣ ಸಣ್ಣ ಉದ್ದಿಮೆದಾರರಿಗೆ ಸಹಾಯ ಹಸ್ತ ನೀಡಿ ಉತ್ತಮ ಸಂಸ್ಥೆಯಾಗಿ ಬೆಳೆದಿದೆ. ಸಂಸ್ಥೆ ಇಂದು ಸಾವಿರಾರು ಮಂದಿಗೆ ತಮ್ಮ ಸ್ವಂತ ಕಾಲ ಮೇಲೆ ನಿಲ್ಲುವಂತೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದರು.
ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ, ಇಂದು ಸಂಘದ ಸದಸ್ಯರು 25 ವರ್ಷದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಿದ್ದಾರೆ. ಮುಂದಕ್ಕೆ ಸಂಸ್ಥೆ ಶತಮಾನೋತ್ಸವ ಆಚರಿಸಲಿ ಎಂದು ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಗುರು ರಾಮಲಿಂಗೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಅದ್ಯಕ್ಷರಾದ ಪ್ರತಾಪ ಗೌಡ ಪಾಟೀಲ್ ಅವರು ಮಾತನಾಡಿ, ಸಂಘದ ನೂತನ ಕಟ್ಟಡ ಆಗಬೇಕೆಂದು ಸರ್ವ ಸದಸ್ಯರ ಆಶಯವಾಗಿತ್ತು. ಅಲ್ಲದೆ ಸ್ಮರಣೀಯ ರೀತಿಯ ಕಟ್ಟಡ ವಾಗಿರಬೇಕು ಎನ್ನುವ ಆಶಯ ಆಗಿತ್ತು. ಇದಕ್ಕೆ ನಮ್ಮ ಎಲ್ಲಾ ಸದಸ್ಯರು ಸಹಕಾರ ಮಾಡಿದ್ದಾರೆ ಅನ್ನುವುದು ಸಂತೋಷದ ವಿಷಯವಾಗಿದೆ ಎಂದರು.
ಸಂಸ್ಥೆ ಬೆಳೆಸುವಲ್ಲಿ ಸರ್ವ ಸದಸ್ಯರು ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಮಾತ್ರ ಸಾಧ್ಯ. ಸಹಕಾರಿ ಕ್ಷೇತ್ರದಲ್ಲಿ ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಮಾಡುವುದರ ಮೂಲಕ ನಮ್ಮ ಸಂಸ್ಥೆ ಆಡಳಿತ ಮಂಡಳಿಯವರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಅನೇಕ ಗಣ್ಯಮಾನ್ಯರು ಮಾತನಾಡಿದರು ಹಾಗೂ ಗಣ್ಯಮಾನ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಷ. ಬ್ರ ವರ ರುದ್ರಮುನಿ ಶಿವಾಚಾರ್ಯ, ಮಾಂತಲಿಂಗ ಮಹಾಸ್ವಾಮಿಗಳು, ಪ್ರತಾಪ್ ಗೌಡ ಪಾಟೀಲ್, ಹಂಪನಗೌಡ ಬಾದರ್ಲಿ ಶಾಸಕರು ಸಿಂಧನೂರು, ಮಾನಪ್ಪ ಡಿ ವಜ್ಜಲ್ ಶಾಸಕರು ಲಿಂಗಸುಗೂರು, ಡಾ. ಶಿವರಾಜ್ ಪಾಟೀಲ್ ಶಾಸಕರು ರಾಯಚೂರು, ಜಿ ನಂಜೇಗೌಡ ಅಧ್ಯಕ್ಷರು ಕ ರಾ ಸೌ ಸಂ ಸ ನಿ ಬೆಂಗಳೂರು, ಅಮರೇಗೌಡ ಬಯ್ಯಾಪುರ ಮಾಜಿ ಕೇಂದ್ರ ಸಚಿವರು, ಕೆ.ವಿರುಪಾಕ್ಷಪ್ಪ ಮಾಜಿ ಸಂಸದರು, ಮನೋಹರ ಮಸ್ಕಿ ಮಾಜಿ ಶಾಸಕರು, ವೆಂಕಟರಾವ್ ನಾಡಗೌಡ ಮಾಜಿ ಸಚಿವರು, ಶರಣ್ಣೇಗೌಡ ಜಿ ಪಾಟೀಲ್ ವ್ಯವಸ್ಥಾಪಕ ನಿರ್ದೇಶಕರುಕ ರಾ ಸೌ ಸಂ ಸ ನಿ, ವಿಶ್ವನಾಥ್ ಪಾಟೀಲ್ ಆರ್ ಕೆ ಡಿ ಸಿ ಸಿ ರಾಯಚೂರು, ಡಾ. ಶಿವ ಶರಣಪ್ಪ ಇತ್ಲಿ, ಮಲ್ಲಯ್ಯ ಅಂಬಾಡಿ ಪುರಸಭೆ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗದವರು ಹಾಗೂ ಪಟ್ಟಣದ ಅನೇಕ ಸಾರ್ವಜನಿಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್