`ನಾನೇ, ಐದು ವರ್ಷ ಸಿಎಂ' ಹಾಸ್ಯಾಸ್ಪದ : ಸಚಿವ ವಿ. ಸೋಮಣ್ಣ
ಬಳ್ಳಾರಿ, 12 ಜುಲೈ (ಹಿ.ಸ.) : ಆ್ಯಂಕರ್ : ಉಪ ಮುಖ್ಯಮಂತ್ರಿಗೆ ಶಾಸಕರ ಬೆಂಬಲ ಇಲ್ಲ ಎಂದು ಮುಖ್ಯಮಂತ್ರಿ ಹೇಳುವುದು ವಿಪರ್ಯಾಸ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಉಪ ಮಂತ್ರಿಗಳ ಸಂಖ್ಯಾಬಲದ ಕುರಿತು ಮುಖ್ಯಮಂತ್ರಿಗಳು ಮಾತನಾಡುವುದು ಹಾಸ್
`ನಾನೇ, ಐದು ವರ್ಷ ಸಿಎಂ' ಹಾಸ್ಯಾಸ್ಪದ : ಸಚಿವ ವಿ. ಸೋಮಣ್ಣ


ಬಳ್ಳಾರಿ, 12 ಜುಲೈ (ಹಿ.ಸ.) :

ಆ್ಯಂಕರ್ : ಉಪ ಮುಖ್ಯಮಂತ್ರಿಗೆ ಶಾಸಕರ ಬೆಂಬಲ ಇಲ್ಲ ಎಂದು ಮುಖ್ಯಮಂತ್ರಿ ಹೇಳುವುದು ವಿಪರ್ಯಾಸ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಉಪ ಮಂತ್ರಿಗಳ ಸಂಖ್ಯಾಬಲದ ಕುರಿತು ಮುಖ್ಯಮಂತ್ರಿಗಳು ಮಾತನಾಡುವುದು ಹಾಸ್ಯಾಸ್ಪದ. `ಐದು ವರ್ಷ ನಾನೇ, ಸಿಎಂ' ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿರುವುದು ಅವರ ಅಭದ್ರತೆಗೆ ಸಾಕ್ಷಿ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ. ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಸತ್ತಿದೆ. ಜನರನ್ನು ಕತ್ತಲೆ ಕೋಣೆಯಲ್ಲಿ ಕೂರಿಸಿ, ಆಡಳಿತ ನಡೆಸುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಒಂದೆಡೆ ಡಿ.ಕೆ. ಶಿವಕುಮಾರ್, ಇನ್ನೊಂದು ಕಡೆ ಸಿದ್ದರಾಮಯ್ಯ ಇದ್ದಾರೆ. ಈ ಸರ್ಕಾರದಿಂದ ಜನರಿಗೆ ಒಳಿತಾಗುತ್ತಿಲ್ಲ ಎಂದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande