ಗ್ಯಾರಂಟಿ ಗೊಂದಲದಲ್ಲಿ ಸರಕಾರ : ಅರವಿಂದ ಬೆಲ್ಲದ
ಧಾರವಾಡ, 12 ಜುಲೈ (ಹಿ.ಸ.) : ಆ್ಯಂಕರ್ : ಗ್ಯಾರಂಟಿ ಯೋಜನೆಗಳ ಹೆಸರಲ್ಲೇ ಸರ್ಕಾರ ಸಾಗಿಸುತ್ತಿರುವ ಕಾಂಗ್ರೆಸ್ ನಾಯಕರಲ್ಲೇ ''ಗ್ಯಾರಂಟಿ'' ಗೊಂದಲ ಮೂಡಿದೆ ಎಂದು ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಲೇವಡಿ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ
ಗ್ಯಾರಂಟಿ ಗೊಂದಲದಲ್ಲಿ ಸರಕಾರ : ಅರವಿಂದ ಬೆಲ್ಲದ


ಧಾರವಾಡ, 12 ಜುಲೈ (ಹಿ.ಸ.) :

ಆ್ಯಂಕರ್ : ಗ್ಯಾರಂಟಿ ಯೋಜನೆಗಳ ಹೆಸರಲ್ಲೇ ಸರ್ಕಾರ ಸಾಗಿಸುತ್ತಿರುವ ಕಾಂಗ್ರೆಸ್ ನಾಯಕರಲ್ಲೇ 'ಗ್ಯಾರಂಟಿ' ಗೊಂದಲ ಮೂಡಿದೆ ಎಂದು ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಲೇವಡಿ ಮಾಡಿದ್ದಾರೆ.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ ರೇವಣ್ಣ ೩ ತಿಂಗಳಿಗೆ ಗೃಹಲಕ್ಷ್ಮೀ ಹಣ ಜಮೆ ಎಂದರೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಪ್ರತಿ ತಿಂಗಳು ಜಮೆ ಎನ್ನುವ ಮೂಲಕ ತಮ್ಮಲ್ಲೇ ತಾಳಮೇಳ ಇಲ್ಲ ಎಂಬುದನ್ನು ಜನತೆಗೆ ಸಾರಿದ್ದಾರೆ.

ತಮ್ಮಲ್ಲಿನ ಗೊಂದಲ ನಿವಾರಿಸಿಕೊಳ್ಳಲಾಗದ ಕೈ ನಾಯಕರು ಜನರ ಗೊಂದಲ ನಿವಾರಿಸುವರೇ? ಭಾಗ್ಯಗಳ ಹೆಸರಿನಲ್ಲೇ ಜನರಿಗೆ ಟೋಪಿ ಹಾಕುವುದೇ ಇವರ 'ಗ್ಯಾರಂಟಿ' ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande