ಶಿಕ್ಷಕರ ಗೆಳೆಯರ ಬಳಗದಿಂದ ಸರ್ಕಾರಿ ಶಾಲೆಗಳ ಸಬಲೀಕರಣ
ಶಿಕ್ಷಕರ ಗೆಳೆಯರ ಬಳಗದಿಂದ ಸರ್ಕಾರಿ ಶಾಲೆಗಳ ಸಬಲೀಕರಣ
ಶಿಕ್ಷಕ ಗೆಳೆಯರ ಬಳಗದಿಂದ ಕೋಲಾರ ನಗರದ ಕೆಇಬಿ ಸಮುದಾಯಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಧಕ ಶಿಕ್ಷಕರನ್ನು ಸನ್ಮಾನಿಸಲಾಯಿತು.


ಕೋಲಾರ, ೧೨ ಜುಲೈ (ಹಿ.ಸ) :

ಆ್ಯಂಕರ್ : ಕೋಲಾರ ಜಿಲ್ಲೆಯ ಶೈಕ್ಷಣಿಕ ಕ್ರಾಂತಿಗೆ ಶಿಕ್ಷಕ ಗೆಳೆಯರ ಬಳಗ ಬೆನ್ನಲುಬಾಗಿ ನಿಂತಿದ್ದು, ದಾನಿಗಳು ನೀಡುವ ಪರಿಕರಗಳನ್ನು ಪಾರದರ್ಶಕವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ತಲುಪಿಸುವ ನಿಸ್ವಾರ್ಥ ಸೇವೆ ಮಾಡುತ್ತಿದೆ ಎಂದು ಬೆಂಗಳೂರು ವಿವಿ ಸೆನೆಟ್ ಸದಸ್ಯ ಹಾಗೂ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಉದಯಕುಮಾರ್ ಪ್ರಂಶಸೆ ವ್ಯಕ್ತಪಡಿಸಿದರು.

ಶಿಕ್ಷಕ ಗೆಳೆಯರ ಬಳಗದಿಂದ ನಗರದ ಕೆಇಬಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಗುರುಶ್ರೇಷ್ಟ ಪುರಸ್ಕಾರ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಗೆಳೆಯರ ಬಳಗದ ಜತೆ ಗುರುತಿಸಿಕೊಂಡಿದ್ದಕ್ಕೆ ಅತ್ಯಂತ ಸಂತಸವಿದೆ, ನಿಮ್ಮ ಪ್ರಾಮಾಣಿಕ ಸೇವೆಗೆ ಜನರೂ ಪ್ರೋತ್ಸಾಹ ನೀಡುತ್ತಿದ್ದಾರೆ, ಇನ್ನಷ್ಟು ಸರ್ಕಾರಿ ಶಾಲೆಗಳ ಬಲವರ್ಧನೆಗೆ ಪ್ರಯತ್ನ ನಡೆಸಿ ಎಂದರು.

ದಾನಿಗಳ ನೆರವು ದುರುಪಯೋಗವಾಗದೇ ನೇರ ಮಕ್ಕಳಿಗೆ ತಲುಪಿಸುವ ಬದ್ದತೆ ಮೆಚ್ಚುವಂತದ್ದು, ಸೌಲಭ್ಯ ಪಡೆದ ಮಕ್ಕಳು ದೇಶದ ಆಸ್ತಿಯಾಗಲಿ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸಂಸ್ಕಾರ ಕುಸಿಯುತ್ತಿದೆ ಎಂಬ ಆರೋಪವಿದೆ, ವಿದ್ಯಾರ್ಥಿಗಳು ಪೊಷಕರು ಆಶಯಗಳನ್ನು ಈಡೇರಿಸಬೇಕು, ನಿಮಗಾಗಿ ಜೀವನವನ್ನೇ ಸವೆಸಿದ ತಂದೆತಾಯಿ,ಗುರುವಿಗೆ ಗೌರವ ನೀಡಬೇಕು ಎಂದರು.

ಮಾಲೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ರಾಮಕೃಷ್ಣಪ್ಪ ಮಾತನಾಡಿ,ಇಂದು ಬದಲಾದ ಪರಿಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದು ಸವಾಲಾಗಿದೆ, ನಮ್ಮ ತಂದೆ,ತಾತರ ಕಾಲದಲ್ಲಿ ಮಕ್ಕಳಿಂದ ತುಂಬಿ ತುಳುಕುತ್ತಿದ್ದ ಸರ್ಕಾರಿ ಶಾಲೆಗಳು ಇಂದು ದಾಖಲಾತಿ ಸಮಸ್ಯೆ ಎದುರಿಸುತ್ತಿವೆ ಎಂದು ತಿಳಿಸಿದರು.

ತಮ್ಮ ಕಾಲೇಜಿನ ಅಭಿವೃದ್ದಿಗೆ ದಾನಿಗಳಿಂದ ೮೦ ಲಕ್ಷ ರೂ ನೆರವು ಪಡೆದು ಅಭಿವೃದ್ದಿಪಡಿಸಲು ಶಿಕ್ಷಕರ ಗೆಳೆಯರ ಬಳಗ ಪ್ರೇರಣೆಯಾಗಿದೆ ಎಂದ ಅವರು, `ಯೋಚಿಸಿ ಇಲ್ಲ ನಶಿಸು' ಎಂಬ ಕಲಾಂ ಅವರ ಮಾತನ್ನು ಸ್ಮರಿಸಿ, ಸರ್ಕಾರಿ ಶಾಲೆ ಉಳಿಸಲು ಯೋಚಿಸೋಣ ಎಂದರು.

ಶಿಕ್ಷಕ ಗೆಳೆಯರ ಬಳಗದ ಕಾರ್ಯದಿಂದಾಗಿ ಸರ್ಕಾರಿ ಶಾಲೆಗಳಿಗೆ ಅನೇಕ ಸೌಲಭ್ಯ ಹರಿದು ಬರುತ್ತಿದೆ, ಬಳಗದ ಸಾಮಾಜಿಕ ಕಾಳಜಿ ಮುಂದುವರೆಯಲಿ ಎಂದು ಆಶಿಸಿ, ಮಕ್ಕಳಿಗೆ ವಿದ್ಯೆ ಜತೆಗೆ ಸಂಸ್ಕಾರ ಕಲಿಸೋಣ ಎಂದರು. ಶಿಕ್ಷಕರ ಜವಾಬ್ದಾರಿ, ಹಿಂದುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ವಹಿಸಬೇಕಾದ ಬದ್ದತೆ ಮತ್ತಿತರ ಅಂಶಗಳ ಕುರಿತು ತಿಳಿಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ, ಶಿಕ್ಷಕ ಗೆಳೆಯರ ಬಳಗ ೨೦ ವರ್ಷಗಳಿಂದ ಈ ಕಾರ್ಯ ಮಾಡಿಕೊಂಡು ಬಂದಿದ್ದು, ಶಾಲೆಗಳ ಬಲವರ್ಧನೆಯ ಸಾಮಾಜಿಕ ಕಾಳಜಿಗೆ ಮೊದಲು ಸಹಕಾರ ನೀಡಿದ್ದು, ಡಿಸಿಪಿ ದೇವರಾಜ್ ಅವರು ಎಂದು ತಿಳಿಸಿ, ಬಳಗದಿಂದ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

ಬೆಂಗಳೂರಿನ ವಿವಿಧ ಕಂಪನಿಗಳ ಸಿಎಸ್‌ಆರ್ ನಿಧಿಯಡಿ ಶಾಲೆಗಳ ಅಗತ್ಯಗಳನ್ನು ಪೂರೈಸಲು ನೆರವಾಗಿದ್ದನ್ನು ಸ್ಮರಿಸಿದ ಅವರು, ಡಿಸಿಪಿ ದೇವರಾಜ್ ಸಹಕಾರದಿಂದ ರಾಜಸ್ತಾನ್ ಯುವಮಂಚ್ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ನೆರವು ಹೆಚ್ಚು ನೀಡುತ್ತಿದೆ ಎಂದರು.

ಬಳಗದ ಉಪಾಧ್ಯಕ್ಷ ವೀರಣ್ಣಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಬಳಗ ಕಳೆದ ೨೦ ವರ್ಷಗಳಿಂದ ಮಾಡಿದ ಸಾಮಾಜಿಕ ಕೆಲಸಗಳ ಕುರಿತು ಬೆಳಕು ಚೆಲ್ಲಿದರು.

ಕಾರ್ಯಕ್ರಮದಲ್ಲಿ ಈ ಸಾಲಿನಲ್ಲಿ ನಿವೃತ್ತರಾದ ಶಿಕ್ಷಕರು, ಗುರುಶ್ರೇಷ್ಟ ಪುರಸ್ಕಾರಕ್ಕೆ ಭಾಜನರಾದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಸಾಧನೆ ಮಾಡಿದ ಶಿಕ್ಷಕರ ಮಕ್ಕಳನ್ನು ಪುರಸ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಗುತ್ತಿಗೆದಾರ ಮಧುಸೂಧನ್, ಶಿಕ್ಷಕ ಗೆಳೆಯರ ಬಳಗದ ಪದಾಧಿಕಾರಿಗಳಾದ ಗೌರವಾಧ್ಯಕ್ಷ ಆರ್.ಶ್ರೀನಿವಾಸನ್, ಸಲಹೆಗಾರ ಚಿಕ್ಕಣ್ಣ, ಸೋಮಶೇಖರ್, ಚಲಪತಿ,ಕೃಷ್ಣಪ್ಪ, ವೆಂಕಟರಾA, ತಾಲ್ಲೂಕು ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ, ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ಆಂಜನೇಯರೆಡ್ಡಿ, ಖಜಾಂಚಿ ವೆಂಕಟೇಶ್, ಜಿಲ್ಲಾ ಸಹಕಾರ್ಯದರ್ಶಿ ನಾರಾಯಣಸ್ವಾಮಿ, ಮಂಜುಳಮ್ಮ, ಭಾಗ್ಯಲಕ್ಷಿö್ಮ, ರೇಷ್ಮಾಖಾನಂ,ಪಾಪಣ್ಣ, ಶ್ರೀನಿವಾಸ್ ಭಾಗವಹಿಸಿದ್ದರು.

ಚಿತ್ರ ; ಶಿಕ್ಷಕ ಗೆಳೆಯರ ಬಳಗದಿಂದ ಕೋಲಾರ ನಗರದ ಕೆಇಬಿ ಸಮುದಾಯಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಧಕ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande