ನವದೆಹಲಿ, 12 ಜುಲೈ (ಹಿ.ಸ.) :
ಆ್ಯಂಕರ್ : ದೇಶದಾದ್ಯಂತ 47 ಸ್ಥಳಗಳಲ್ಲಿ ಇಂದು 16ನೇ ಉದ್ಯೋಗ ಮೇಳ ನಡೆಯುತ್ತಿದ್ದು, ಈ ಸಂದರ್ಭ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 51,000 ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರಗಳನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ವಿತರಿಸಲಿದ್ದಾರೆ.
ಪ್ರಧಾನಿ ಅವರು ಬೆಳಿಗ್ಗೆ 11 ಗಂಟೆಗೆ ನೂತನ ನೇಮಕಾತಿ ಪಡೆದ ಉದ್ಯೋಗಿಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಪಿಐಬಿ ಪ್ರಕಟಣೆಯ ಪ್ರಕಾರ, ಈ ನೇಮಕಾತಿಗಳು ರೈಲ್ವೆ, ಗೃಹ ವ್ಯವಹಾರ, ಅಂಚೆ, ಆರೋಗ್ಯ, ಹಣಕಾಸು ಸೇವೆಗಳು, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸೇರಿದಂತೆ ಹಲವಾರು ಕೇಂದ್ರ ಇಲಾಖೆಗಳಲ್ಲಿಯೇ ನಡೆದಿದೆ.
ಈ ಉದ್ದಿಮೆ ಮೇಳವು ಪ್ರಧಾನ ಮಂತ್ರಿಯ ಉದ್ಯೋಗ ಸೃಷ್ಟಿ ಬದ್ಧತೆಯ ಪ್ರತಿಫಲನವಾಗಿದ್ದು, ಈಗಾಗಲೇ ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ನೇಮಕಾತಿಗಳನ್ನು ಈ ವೇದಿಕೆಯ ಮೂಲಕ ನೆರವೇರಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa