ಹೊಸ ವಿನ್ಯಾಸದೊಂದಿಗೆ ಗುಣಮಟ್ಟದ ನಂದಿನಿ ತುಪ್ಪ
ಬೆಂಗಳೂರು, 11 ಜುಲೈ (ಹಿ.ಸ.) : ಆ್ಯಂಕರ್ : ನಂದಿನಿ ತುಪ್ಪದ ಗುಣಮಟ್ಟ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹಾಲ್‌ ಮಾರ್ಕ್ ಸಹಿತ ಹೊಸ ವಿನ್ಯಾಸವನ್ನು ಹೊಂದಿರುವ ಪ್ಯಾಕೆಟ್‌ ಅನ್ನು ಕೆಎಂಎಫ್‌ ಪರಿಚಯಿಸಿದೆ. ಇಂದು ಬೆಂಗಳೂರು ಹಾಲು ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ ನಿರ್ದೇಶಕರೊ
Nandini


ಬೆಂಗಳೂರು, 11 ಜುಲೈ (ಹಿ.ಸ.) :

ಆ್ಯಂಕರ್ : ನಂದಿನಿ ತುಪ್ಪದ ಗುಣಮಟ್ಟ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹಾಲ್‌ ಮಾರ್ಕ್ ಸಹಿತ ಹೊಸ ವಿನ್ಯಾಸವನ್ನು ಹೊಂದಿರುವ ಪ್ಯಾಕೆಟ್‌ ಅನ್ನು ಕೆಎಂಎಫ್‌ ಪರಿಚಯಿಸಿದೆ. ಇಂದು ಬೆಂಗಳೂರು ಹಾಲು ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ ನಿರ್ದೇಶಕರೊಂದಿಗೆ ನಂದಿನಿ ತುಪ್ಪದ ಹೊಸ ಪ್ಯಾಕೇಟ್‌ಗಳನ್ನು ಲೋಕಾರ್ಪಣೆಗೊಳಿಸಿದರು.

ನೂತನವಾಗಿ ಬಿಡುಗಡೆಯಾಗಿರುವ ನಂದಿನಿ ತುಪ್ಪದ ಪ್ಯಾಕೆಟ್‌ಗಳಲ್ಲಿ ಅರ್ಧ ಲೀಟರ್ ಮತ್ತು ಒಂದು ಲೀಟರ್‌ ಪ್ರಮಾಣದಲ್ಲಿ ಗ್ರಾಹಕರಿಗೆ ದೊರೆಯಲಿದೆ. ಗ್ರಾಹಕರು ಪ್ಯಾಕೇಟ್‌ ಮೇಲಿರುವ ಕ್ಯೂಆರ್‌ ಕೋಡ್‌ ಮೂಲಕ ಅದರ ಪೂರ್ಣ ಮಾಹಿತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೊಸ ಅವಿಷ್ಕಾರಗಳೊಂದಿಗೆ ಅದೇ ಗುಣಮಟ್ಟ ಕಾಯ್ದುಕೊಂಡು ಹೊಸ ಮೈಲಿಗಲ್ಲುಗಳನ್ನು ತಲುಪುವುದಕ್ಕೆ ನಮ್ಮ ನಂದಿನಿ ಸಜ್ಜಾಗುತ್ತಿದೆ ಎಂದು ಸುರೇಶ ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande