ಮಣಿಪುರದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆ
ಇಂಫಾಲ, 28 ಜೂನ್ (ಹಿ.ಸ.) : ಆ್ಯಂಕರ್ : ಮಣಿಪುರದ ಕಾಕ್ಚಿಂಗ್, ಬಿಷ್ಣುಪುರ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಕಾಕ್ಚಿಂಗ್ ಜಿಲ್ಲೆಯಲ್ಲಿ ಐಎನ್ಎಸ್ಎಎಸ್ ರೈಫಲ್, ಮಾರ್
Arams  recovery


ಇಂಫಾಲ, 28 ಜೂನ್ (ಹಿ.ಸ.) :

ಆ್ಯಂಕರ್ : ಮಣಿಪುರದ ಕಾಕ್ಚಿಂಗ್, ಬಿಷ್ಣುಪುರ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.

ಕಾಕ್ಚಿಂಗ್ ಜಿಲ್ಲೆಯಲ್ಲಿ ಐಎನ್ಎಸ್ಎಎಸ್ ರೈಫಲ್, ಮಾರ್ಪಡಿಸಿದ AK-56, .32 ಪಿಸ್ತೂಲ್, ಐಇಡಿಗಳು, ಮಾರ್ಟರ್ ಬಾಂಬ್, ಅಶ್ರುವಾಯು ಶೆಲ್‌ಗಳು ಹಾಗೂ ಸಂವಹನ ಉಪಕರಣಗಳು ವಶಪಡಿಸಲಾಗಿದೆ. ಬಿಷ್ಣುಪುರ ಜಿಲ್ಲೆಯಲ್ಲಿ SLR ರೈಫಲ್, AK ರೈಫಲ್ ಮತ್ತು ಬಂದೂಕುಗಳು ಪತ್ತೆಯಾಗಿದ್ದು, ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಬರ್ಮಾದ ಪಿಸ್ತೂಲ್‌ಗಳು ಮತ್ತು ಹ್ಯಾಂಡ್ ಗ್ರೆನೇಡ್‌ಗಳು ಸಿಕ್ಕಿವೆ.

ಶಸ್ತ್ರಾಸ್ತ್ರಗಳ ಈ ಪತ್ತೆ ರಾಜ್ಯದ ಭದ್ರತಾ ಪರಿಸ್ಥಿತಿಗೆ ಹೊಸ ತಿರುವು ನೀಡಿದ್ದು, ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ಮತ್ತಷ್ಟು ಬಿಗಿಗೊಳ್ಳಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande