ವಿಶಾಖಪಟ್ಟಣಂ, 21 ಜೂನ್ (ಹಿ.ಸ.) :
ಆ್ಯಂಕರ್ : ಯೋಗವು ವಿಶ್ವದ ದೇಶಗಳನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಯೋಗ ದಿನದ ಪ್ರಸ್ತಾಪವನ್ನು 175 ದೇಶಗಳು ಬೆಂಬಲಿಸಿವೆ, 175 ದೇಶಗಳಲ್ಲಿ ಯೋಗ ಮಾಡುವುದು ಸಾಮಾನ್ಯ ವಿಷಯವಲ್ಲ ಎಂದರು.
ಯೋಗವು ಮಾನವೀಯತೆಯನ್ನು ಹೆಚ್ಚಿಸುವ ಸಾಮೂಹಿಕ ಪ್ರಕ್ರಿಯೆ ಎಂದು ತಿಳಿಸಿದರು. ಅಂತಾರಾಷ್ಟ್ರೀಯ ಯೋಗ ದಿನದಂದು ಎಲ್ಲರಿಗೂ ಶುಭ ಹಾರೈಸುತ್ತಾ, ಕಳೆದ ಹತ್ತು ವರ್ಷಗಳಲ್ಲಿ ಕೋಟ್ಯಂತರ ಜನರ ಜೀವನವನ್ನು ಯೋಗವು ಬೆಳಗಿಸಿದೆ. ಯುವಕರು ಹಳ್ಳಿಗಳಲ್ಲಿ ಯೋಗವನ್ನು ಅನುಸರಿಸುತ್ತಿದ್ದಾರೆ. ಯೋಗಕ್ಕೆ ಯಾವುದೇ ಗಡಿಗಳಿಲ್ಲ ಮತ್ತು ಯೋಗ ಮತ್ತು ವಯಸ್ಸಿಗೆ ಯಾವುದೇ ಸಂಬಂಧವಿಲ್ಲ ಎಂದು ಮೋದಿ ಪ್ರತಿಪಾದಿಸಿದರು.
ಯೋಗವು ಮನುಷ್ಯನು ಪ್ರಕೃತಿಯಲ್ಲಿ ಪಾಲುದಾರ ಎಂಬುದನ್ನು ನಮಗೆ ನೆನಪಿಸುತ್ತದೆ ಎಂದ ಅವರು. ಯೋಗದೊಂದಿಗೆ ವೈಯಕ್ತಿಕ ಶಿಸ್ತನ್ನು ಬೆಳೆಸಲಾಗುತ್ತದೆ ಮತ್ತು ಯೋಗದ ಮೂಲಕ ನಾನು ಎಂಬ ಪರಿಕಲ್ಪನೆಯು ನಾವು ಆಗುತ್ತದೆ ಎಂದು ಪ್ರಧಾನಿ ತಿಳಿಸಿದರು. ನಾವು ಎಂಬ ಪರಿಕಲ್ಪನೆಯು ಮಾನವೀಯತೆಯನ್ನು ಹೆಚ್ಚಿಸುತ್ತದೆ ಮತ್ತು ನಾನು ಎಂಬುದು ಜಗತ್ತಿನಲ್ಲಿ ಅಶಾಂತಿ ಮತ್ತು ಅಸ್ಥಿರತೆಗೆ ಕಾರಣವಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa